ಜುಲೈ 06: ದುಬೈನ ಶೇಖ್ ರಾಶಿದ್ ಅಡಿಟೋರಿಯಂನಲ್ಲಿ ರಾರಾಜಿಸಲಿದೆ ದಾಸ್ ಕುಡ್ಲ ತಂಡ ► 40 ಕ್ಕೂ ಹೆಚ್ಚು ಗಾಯಕರಿಂದ ‘ಸುರ್ ಸಂಗಮ್’ ಸಂಗೀತ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಜೂ.30. ಕರ್ನಾಟಕದಲ್ಲಿ ಸತತ 29 ವರ್ಷಗಳಿಂದ ಸಾವಿರಾರು ಗಾಯಕರಿಂದ ಸಂಗೀತ ಪ್ರೇಮಿಗಳಿಗೆ ರಸದೌತಣ ನೀಡಿದ ದಾಸ್ ಕುಡ್ಲಾಸ್ ತಂಡವು ಇದೀಗ ತಮ್ಮ 30ನೇ ವರ್ಷದ ಸಂಭ್ರಮವನ್ನು ದುಬೈನ ಊದ್ ಮೆಹ್ತಾದಲ್ಲಿರುವ ಇಂಡಿಯನ್ ಹೈಸ್ಕೂಲಿನ ಶೇಕ್ ರಾಶಿದ್ ಅಡಿಟೋರಿಯಂನಲ್ಲಿ ‘ಸುರ್ ಸಂಗಮ್’ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ ಬಹಳಷ್ಟು ಅದ್ಧೂರಿಯಾಗಿ ಆಚರಿಸಲಿದೆ.

ಸೌಹಾರ್ದ ಲಹರಿ ಹಾಗೂ ಪ್ರೀಷಿಯಸ್ ಪಾರ್ಟೀಸ್ ಆಂಡ್ ಎಂಟರ್ಟೈನ್’ಮೆಂಟ್ ಸಹಭಾಗಿತ್ವದಲ್ಲಿ ಜುಲೈ 6 ರಂದು ಸಂಜೆ 6 ಗಂಟೆಯಿಂದ ಸತತ 4 ಗಂಟೆಗಳ ಕಾಲ ಸುಮಾರು 40 ಕ್ಕೂ ಹೆಚ್ಚಿನ ಪ್ರತಿಭಾವಂತ ಗಾಯಕರು, ಸಿನಿಮಾ ಹಿನ್ನೆಲೆ ಗಾಯಕರು ನಿರಂತರವಾಗಿ ತಮ್ಮ ಸುಮಧುರ ಗಾಯನದಿಂದ ಹೊಸ ಸಂಗೀತ ಲೋಕಕ್ಕೆ ಸಭಿಕರನ್ನು ಕೊಂಡೊಯ್ದು ರಂಜಿಸಲು ಸುರುಸಂಗಮ್ ತಂಡದಿಂದ ಭರ್ಜರಿ ತಯಾರಿ ನಡೆಸಿದ್ದು, ಕರ್ನಾಟಕದ ಸಂಗೀತ ಕಾರ್ಯಕ್ರಮದಲ್ಲಿ ಛಾಪನ್ನು ಮೂಡಿಸಿರುವ ಸುರುಸಂಗಮ್ ದುಬೈನಲ್ಲೂ ಯುಎಇ ಅನಿವಾಸಿ ಭಾರತೀಯರ ಮನಗೆಲ್ಲಲು, ಸರ್ವರೀತಿಯಲ್ಲಿ ಸನ್ನಧ್ಧವಾಗಿದೆ. 29 ವರ್ಷಗಳಿಂದ ದಾಸ್ ಕುಡ್ಲಾಸ್ ಉನ್ನತ ಮಟ್ಟದ ಸಂಗೀತ ಕಾರ್ಯಕ್ರಮ ನಡೆಸುತ್ತಾ ಬಂದಿರುವ ಕಾರಣದಿಂದ ಸಂಗೀತ ಪ್ರೇಮಿಗಳಲ್ಲಿ ಪ್ರಥಮ ಬಾರಿಗೆ ದುಬೈನಲ್ಲಿ ನಡೆಯುತ್ತಿರುವ ಸುರುಸಂಗಮ್ ಕಾರ್ಯಕ್ರಮ ಬಗ್ಗೆ ಬಹಳಷ್ಟು ನಿರೀಕ್ಷೆ ಮೂಡಿಸುವಂತೆ ಮಾಡಿದೆ.

Also Read  ಮಸೀದಿ ಸ್ಫೋಟದ ಅಪರಾಧಿ ಸೇರಿ ಐವರಿಗೆ ಗಲ್ಲು ಶಿಕ್ಷೆ  

ದಕ್ಷಿಣ ಭಾರತದ ಹಲವಾರು ಪ್ರಸಿದ್ಧ ಸಿನಿಮಾ ಹಿನ್ನೆಲೆ ಗಾಯಕರು ಹಾಗೂ ಯುಎಇಯ ಅರ್ಹ ಉದಯೋನ್ಮುಖ ಗಾಯಕರಿಗೆ ಅಂತರಾಷ್ಟ್ರೀಯ ವೇದಿಕೆಯಲ್ಲಿ ಹಲವಾರು ಭಾಷೆಗಳ ಜನಮನದಲ್ಲಿ ಅಚ್ಚಾಗಿ ಉಳಿದಿರುವ ಪ್ರಸಿದ್ಧ ಹಾಡುಗಳನ್ನು ಹಾಡಲಿದ್ದಾರೆ. ಯುಎಇಯ ಪ್ರಸಿದ್ಧ ಎಬಿಸಿಡಿ ಡ್ಯಾನ್ಸ್ ತಂಡದಿಂದ ಆಕರ್ಷಕ ಡ್ಯಾನ್ಸ್ ಬಾಲಿವುಡ್ ನಟರೊಂದಿಗೆ ಫಿಲಂಫೇರ್ ಕಾರ್ಯಕ್ರಮದಲ್ಲಿ ತನ್ನ ಕಲಾ ಪ್ರದರ್ಶನ ನಡೆಸಿ ಪ್ರಪಂಚದಾದ್ಯಂತ ತನ್ನ ವಿಶಿಷ್ಟ ನಟನಾ ಕೌಶಲ್ಯದ ಕಾರ್ಯಕ್ರಮ ನೀಡುತ್ತಿರುವ ನಾಗೇಶ್ ಬುರ್ಬರೆ ನೆರೆದಿರುವ ಸಾವಿರಾರು ಜನರನ್ನು ರಂಜಿಸಲಿದ್ದಾರೆ.

ಹಿಂದಿ, ಕನ್ನಡ, ತುಳು, ಮಲಯಾಳಂ, ತಮಿಳು, ತೆಲುಗು, ಮರಾಠಿ, ಕೊಂಕಣಿ, ಪಂಜಾಬಿ, ರಾಜಸ್ಥಾನಿ, ಬ್ಯಾರಿ ಹೀಗೆ ಹತ್ತಕ್ಕೂ ಹೆಚ್ಚಿನ ಭಾಷೆಯ ಪ್ರಸಿದ್ಧ ಹಾಡುಗಳನ್ನು ಒಂದೇ ವೇದಿಕೆಯಲ್ಲಿ ಹಾಡಿಸಿ ಯುಎಇಯ ಇತಿಹಾಸದಲ್ಲಿಯೇ ಹೊಸ ಐತಿಹಾಸಿಕ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಮಧುರ ಸಂಜೆಯನ್ನು ಆಸ್ವಾದಿಸಲು ಇಚ್ಛಿಸುವ ಸಂಗೀತ ಪ್ರೇಮಿಗಳಿಗೆ 250, 100, 50 ಮತ್ತು 30 ದಿರ್ಹಾಮಿನ ನಿಯಮಿತ ಟಿಕೆಟ್‍ಗಳು ಮಾತ್ರ ಲಭ್ಯವಿದ್ದು, ಕಾರ್ಯಕ್ರಮದ ಟಿಕೆಟ್ ಪಡೆಯಲು ದುಬೈನಲ್ಲಿ 0507855649, 0505588745, 0558898655, ಅಬುಧಾಬಿಯಲ್ಲಿ 0504401152, 0504953432 ಮತ್ತು ಶಾರ್ಜಾದಲ್ಲಿ 0505588375, 0556677249, 0506580103 ಸಂಖ್ಯೆಗೆ ದೂರವಾಣಿ ಅಥವಾ ವಾಟ್ಸಪ್ ಮೂಲಕವು ಸಂಪರ್ಕಿಸಬಹುದು.

Also Read  "ನನಗೆ ಹುಡುಗ ಬೇಕು.. ಹುಡುಕಿ ಕೊಟ್ಟವರಿಗೆ 4 ಲಕ್ಷ ರೂ. ಬಹುಮಾನ"- ಬಂಪರ್ ಆಫರ್ ಘೋಷಿಸಿದ ಮಹಿಳೆ

error: Content is protected !!
Scroll to Top