ಬೆಳ್ಳಾರೆ: ಮದ್ಯವೆಸನಿ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com.ಬೆಳ್ಳಾರೆ.ಜೂ.30. ವ್ಯಕ್ತಿರ್ವೋವರು ಮಾನಸಿಕ ಖಿನ್ನತೆಯಿಂದ ನೇಣು ಬಿಗಿದು ಕೊಂಡು ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಾರೆಯ, ಮರಕ್ಕಡ ಎಂಬಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬೆಳ್ಳಾರೆಯ ಪುತ್ತೂರು ತಾಲೂಕಿನ ಕ್ಯಾಮಣ ಗ್ರಾಮದ ಮರಕ್ಕಡ ಮನೆಯ, ನಿವಾಸಿ ಐತಪ್ಪ(60) ಎಂದು ತಿಳಿದು ಬಂದಿದೆ.

ಇವರು ವಿಪರೀತ ಮದ್ಯ ಸೇವನೆಯ ಚಟದವರಾಗಿದ್ದು ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತಿದ್ದರು. ಇದರಿಂದಾಗಿ ಶುಕ್ರವಾರ ದಂದು ಮಧ್ಯಾಹ್ನ ಮನೆಯ ಮಾಡಿನ ಬಿದಿರಿನ ಪಕ್ಕಾಸಿಗೆ ಬೈರಾಸೊಂದನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಶೂಟಿಂಗ್ ನಲ್ಲಿ ವಿಶ್ವದಾಖಲೆ ಬರೆದ ಭಾರತದ ಮನು ಬಾಕರ್

 

error: Content is protected !!
Scroll to Top