ಕಡಬ: ಜೆಸಿಐಯಿಂದ ಕೊಲ ಎಂಡೋಪಾಲನಾ ಕೇಂದ್ರಕ್ಕೆ ಅಕ್ಕಿ ವಿತರಣೆ

(ನ್ಯೂಸ್ ಕಡಬ) newskadaba.com,ಕಡಬ.ಜೂ.30. ಕದಂಬ ಜೆಸಿಐ ವತಿಯಿಂದ ಕೊಲ ಎಂಡೋಪಾಲಾನ ಕೇಂದ್ರದಲ್ಲಿರುವ ಎಂಡೋ ಸಂತ್ರಸ್ತರಿಗೆ ಅಕ್ಕಿ ವಿತರಿಸುವ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಮಂಗಳೂರು ಸೇವಾ ಭಾರತಿ ಆಶ್ರದಲ್ಲಿ ಮೇಲ್ವಿಚಾರಣೆಯಲ್ಲಿ ನಡೆಯುತ್ತಿರುವ ಕೊಲ ಎಂಡೋಪಾಲನಾ ಕೇಂದ್ರದಲ್ಲಿ ಕಡಬ ಕದಂಬ ಜೆಸಿಐ ನ ನಿಕಟ ಪೂರ್ವಧ್ಯಕ್ಷ ಜಯರಾಮ ಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಅವರು ಕೊಡಮಾಡಿದ ಒಂದು ಕಿಂಟ್ವಾಲ್ ಅಕ್ಕಿಯನ್ನು ಎಂಡೋಪಾಲನಾ ಕೇಂದ್ರದ ಪ್ರಮುಖರಿಗೆ ಹಸ್ತಾಂತರಿಸಲಾಯಿತು. ಎಂಡೋ ಸಂತ್ರಸ್ತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಜಯರಾಮ ಗೌಡ ಸಂತ್ರಸ್ತರಿಗೆ ಸಿಹಿತಿಂಡಿ ತಿನ್ನಿಸುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಜೆಸಿಐ ಕಡಬ ಕದಂಬದ ಅಧ್ಯಕ್ಷ ವೆಂಕಟೇಶ್ ಪಾಡ್ಲ, ನಿಕಟಪೂರ್ವಧ್ಯಕ್ಷರಾದ ದಿವಾರಕ ಎಂ, ದಿನೇಶ್ ಆಚಾರ್, ಕಡಬ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಲ, ಎಂಡೋಪಾಲನಾ ಕೇಂದ್ರದ ಫಿಸಿಯೋಥೆರಪಿಸ್ಟ್ಗಳಾದ ವಿಜಿತಾ, ಸವಿತಾ, ಕ್ರಾಫ್ಟ್ ಶಿಕ್ಷಕಿ ನಮಿತಾ ಪಿ.ಎನ್, ಸಿಬಂದಿಗಳಾದ ಜಯಂತಿ, ವಿಶಾಲಾಕ್ಷಿ, ರಾಜೀವಿ ಪೂಜಾರಿ, ಐಸಮ್ಮ, ಸಂತೋಷ್, ವಿಶ್ವನಾಥ ಮೊದಲಾದವರು ಉಪಸ್ಥಿತರಿದ್ದರು. ಕಡಬ ಕದಂಬ ಜೆಸಿಐ ಚಾರಿಟೆಬಲ್ ಟ್ರಸ್ಟ್ನ ಅಧ್ಯಕ್ಷ ನಾಗರಾಜ್ ಎನ್.ಕೆ ಸ್ವಾಗತಿಸಿ ನಿರೂಪಿಸಿದರು. ಎಂಡೋ ಪಾಲನ ಕೇಂದ್ರದ ವಿಶೇಷ ಶಿಕ್ಷಕಿ ಶಶಿಕಲಾ ವಂದಿಸಿದರು.

Also Read  ಫಾಝಿಲ್ ಹತ್ಯೆಯಲ್ಲಿ ಬಳಸಲಾದ ಕಾರು ಕಾರ್ಕಳದಲ್ಲಿ ಪತ್ತೆ ➤ ಕಾರು ಮಾಲಕ ಸೇರಿದಂತೆ ಹಲವರು ಪೊಲೀಸ್ ವಶಕ್ಕೆ

 

error: Content is protected !!
Scroll to Top