(ನ್ಯೂಸ್ ಕಡಬ) newskadaba.com, ಕಡಬ.ಜೂ.29. ಆಸಕ್ತಿದಾಯಕ ಶಿಕ್ಷಣದಿಂದ ರಾಷ್ಟ್ರನಿರ್ಮಾಣ ಸಾಧ್ಯ ಕ್ಯಾ.ಗಣೇಶ್ ಕಾರ್ಣಿಕ್ ಸರಸ್ವತೀ ವಿದ್ಯಾಲಯ ವಿದ್ಯಾನಗರ ಕಡಬ ಇಲ್ಲಿ 2018ನೇ ಸಾಲಿನಲ್ಲಿ ಸಂಸ್ಥೆಗೆ ಸೇರಿದ ನೂತನ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಯಾ.ಗಣೇಶ್ ಕಾರ್ಣಿಕ್ , ಮಾಜಿ ವಿಧಾನ ಪರಿಷತ್ ಸದಸ್ಯರು ವಹಿಸಿ ಆಸಕ್ತಿದಾಯಕ ಶಿಕ್ಷಣದಿಂದ ರಾಷ್ಟ್ರನಿರ್ಮಾಣ ಸಾಧ್ಯ ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿ ಕೆ.ಎಸ್.ಎಸ್.ಕಾಲೇಜಿನ ಉಪಪ್ರಾಂಶುಪಾಲ ಮಂಜುನಾಥ.ಎಸ್.ಭಟ್ ಮಾತಾನಾಡಿ ಮೌಲ್ಯಾಧಾರಿತ ಶಿಕ್ಷಣ ಸಿಗಬೇಕಾದರೆ ಸನಾತನ ಸಂಸ್ಕೃತಿಯನ್ನು ಉಳಿಸುವಂತಹ ಶಿಕ್ಷಣ ಸಂಸ್ಥೆಗಳು ಈಗ ಅಗತ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಕ್ಕಳು ಹಿರಿಯರಿಂದ ಆಶೀರ್ವಾದ ಾಪಡೆದರು. ಮುಖ್ಯ ಅತಿಥಿಗಳಾಗಿ ಮೆಸ್ಕಾಂ ಅಧಿಕಾರಿ ನಾಗರಾಜ್ ಹಾಗೂ ಕಾಶಿನಾಥ್ ಗೋಖಟೆ ನಾಡೋಳಿ ಡಯಾಗ್ನಸ್ಟಿಕ್ ಸೆಂಟರ್ ಇವರು ಮಕ್ಕಳಿಗೆ ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕರಾದ ಶ್ರೀಯುತ.ವೆಂಕಟರಮಣ ರಾವ್ ಮಂಕುಡೆ ಸಂಸ್ಥೆ ನಡೆದು ಬಂದ ಹಾದಿಯನ್ನು ತಿಳಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕ ಮಾಧವ ಕೋಲ್ಪೆ ಧನ್ಯವಾದಗೈದರು. ಶಿಕ್ಷಕ ವಸಂತ್ ಕರ್ಂಬೋಡಿ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಶಿಶುಮಂದಿರದ ವ್ಯವಸ್ಥಾಪಕಿ ಶ್ರೀಮತಿ.ಸವಿತಾ ಭಟ್ ಉಪಸ್ಥಿತರಿದ್ದರು.