ಬೆಳ್ತಂಗಡಿ: ಅಂಗಡಿ ವ್ಯಾಪಾರಸ್ಥನ ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ

(ನ್ಯೂಸ್ ಕಡಬ)newskadaba.com, ಬೆಳ್ತಂಗಡಿ.ಜೂ.29. ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆಯೊಂದು ಗುರುವಾರ ದಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಅಲಾದಿಕೊಟ್ಟಿಗೆ ಎಂಬಲ್ಲಿ ಮಹಮ್ಮದ್ ಆಸೀಫ್(32) ಎಂಬುವವರು ಎಂದಿನಂತೆ  ಬೆಳಿಗ್ಗೆ ಬಾಬ್ತು ಅಂಗಡಿ ವ್ಯಾಪಾರ ಮಾಡಿಕೊಂಡಿರುವ ಸಮಯದಲ್ಲಿ,ಏಕಾಏಕಿ ಅಂಗಡಿಯೊಳಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಂಗಡಿಯ ಒಳಗಿನಿಂದ ಅಂಗಳಕ್ಕೆ ಎಳೆದುಕೊಂಡು ಬಂದು ಕಬ್ಬಿಣದ ರಾಡಿನಿಂದ ಮುಖಕ್ಕೆ ಹೊಡೆದುದ್ದಲ್ಲದೇ ಅಂಗಡಿಯೊಳಗೆ ಇರಿಸಿದ್ದ ಸೋಡಾ ಬಾಟ್ಲಿಗಳಿಂದ ಯದ್ವಾತದ್ವಾ ಹಲ್ಲೆ ನಡೆಸಿ ಕೊಲ್ಲುವ ಉದ್ದೇಶದಿಂದ ನೆಲಕ್ಕೆ ದೂಡಿ ಹಾಕಿ ಕಾಲಿನಿಂದ ತುಳಿದು ಮರಾಣಾಂತಿಕ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದೆ.

Also Read  ಕಡಬ: ವಿಷ ಸೇವಿಸಿ ವೃದ್ಧೆ ಆತ್ಮಹತ್ಯೆ

ಹಲ್ಲೆ ನಡೆಸಿದ  ಆರೋಪಿಗಳನ್ನು ಸಿದ್ದಿಕ್‌ ಸಮದ್‌, ಯಾಕೂಬ್‌ ಗಾಬು ಹಾಗೂ ಇತರರು ಇದ್ದರೆಂದು ಗುರುತಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

 

 

 

 

 

 

 

 

 

 

 

error: Content is protected !!
Scroll to Top