ಕರ್ನಾಟಕ ರಾಜ್ಯ ವಕ್ಫ್ ಮಂಡಳಿ : ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಆದರ್ಶ ಮಸೀದಿಯಾಗಿ ಆಯ್ಕೆ ; 80,000 ರೂ ಚೆಕ್ ಮಂಜೂರು

(ನ್ಯೂಸ್ ಕಡಬ) newskadaba.com,ಜೂ.29. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ,ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಮಂಡಳಿ ಸುಳ್ಯ ತಾಲೂಕಿನ ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯನ್ನು ಆದರ್ಶ ಮಸೀದಿ ಎಂದು ನಿರ್ವಹಿಸುವುದಕ್ಕಾಗಿ ಒಟ್ಟು ೮೦,೦೦೦ ರೂ ಚೆಕ್ ಮಂಜೂರು ಗೊಂಡಿರುತ್ತದೆ.
ಮಂಜೂರು ಗೊಂಡಿರುವ ಮೊತ್ತದಲ್ಲಿ ಮಾಹಿತಿ ಕೇಂದ್ರ ಸ್ಥಾಪಿಸಲು ಮಸೀದಿಗೆ ೩೦,೦೦೦ ರೂ ,ಗಣಕ ಯಂತ್ರ ,ಪ್ರಿಂಟರ್ ಹಾಗೂ ಯು ಪಿ ಯಸ್ ಖರೀದಿಸಲು, ಅದರೊಂದಿಗೆ ಡಾಟಾ ಎಂಟ್ರಿ ಒಪರೇಟರ್ ನೇಮಕಾತಿಗೆ ೫೦,೦೦೦ ರೂ ಮಂಜೂರು ಗೊಂಡಿರುತ್ತದೆ .

ಮಸೀದಿಗೆ ಮಂಜೂರು ಗೊಂಡ ಮೊತ್ತದ ಚೆಕ್ ಅನ್ನು ಜೂನ್ ೨೮ ರಂದು ಜಿಲ್ಲಾ ವಕ್ಫ್ ಕಛೇರಿಯಲ್ಲಿ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಅಧ್ಯಕ್ಷರಾದ ಹಾಜಿ ಯು ಕೆ ಕಣಚೂರು ಮೋನು ರವರು ಬೆಳ್ಳಾರೆ ಝಕರಿಯಾ ಜುಮಾ ಮಸೀದಿ ಅಧ್ಯಕ್ಷರಾದ ಕೆ ಎಂ ಮಹಮ್ಮದ್ ಹಾಜಿ ಬೆಳ್ಳಾರೆ ಯವರಿಗೆ ಹಸ್ತಾಂತರಿಸಿದರು .ಈ ಸಂದರ್ಭದಲ್ಲಿ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ನಾಯಕರು ಉಪಸ್ಥಿತರಿದ್ದರು.

Also Read  ಪರಿಶಿಷ್ಟ ಪಂಗಡದ ಜನರ ಆರ್ಥಿಕ ಅಭಿವೃದ್ದಿಗಾಗಿ ವಿವಿಧ ಯೋಜನೆಗಳಡಿಯಲ್ಲಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನ

 

 

 

error: Content is protected !!
Scroll to Top