ಮಾತೃಭಾಷೆಯ ಬಗ್ಗೆ ಪ್ರೀತಿ ಇರಲಿ ಡಾ. ಪ್ರಭಾಕರ ಭಟ್ ಕಲ್ಲಡ್ಕ

(ನ್ಯೂಸ್ ಕಡಬ) newskadaba.com ಕಡಬ,ಜೂ.28. ಕಡಬದ ಸರಸ್ವತೀ ವಿದ್ಯಾಲಯದ ಪ್ರೌಢ ಹಾಗೂ ಪದವಿಪೂರ್ವ ವಿಭಾಗಕ್ಕೆ ಹೊಸದಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಸುಬ್ರಹ್ಮಣ್ಯ ಮಠದ ದಿವಾನರಾಗಿರುವ ಶ್ರೀ ಸುದರ್ಶನ ಜೋಯಿಸ ಇವರು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿದರು. ಇವರು ಗುರು ಶಿಷ್ಯರ ಮಧ್ಯೆ ಇರುವ ಸಂಬಂಧ ಮತ್ತು ಗುರುವಿನ ಮಹತ್ವವನ್ನು ತಿಳಿಸಿದರು. ಬಳಿಕ ಮಾತನಾಡಿದ ಇನ್ನೋರ್ವ ಅತಿಥಿಯಾದ ಪ್ರಗತಿಪರ ಕೃಷಿಕರಾಗಿರುವ ನೂಜಿಬಾಳ್ತಿಲದ ಅಕ್ಷಯ ಕುಮಾರ್ ಕೂರಟ ಇವರು ಶಿಕ್ಷಣದ ಮಹತ್ವವನ್ನು ತಿಳಿಸಿದರು ಅಲ್ಲದೆ ಸಂಸ್ಕಾರಯುತ ಶಿಕ್ಷಣ ನಿಡುತ್ತಿರುವ ಸಂಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಸಭಾಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ಮಾತಾಡಿ ಮೆಕಾಲೆ ಶಿಕ್ಷಣದಿಂದ ಇಂದು ಭಾರತೀಯ ಸಂಸ್ಕೃತಿ ಭಾಷೆ, ಜೀವನ ಶೈಲಿ ಎಲ್ಲವು ಅಳಿದು ಹೋಗಿ ಎಲ್ಲವು ಇಂಗ್ಲೀಷ್ ಮಯವಾಗಿದೆ. ನಮ್ಮಲ್ಲಿ ನಮಗೆ ಸಂಬಿಕೆ ಇಲ್ಲವಾಗಿದೆ. ನಮ್ಮತನವನ್ನು ಉಳಿಸಿಕೊಳ್ಳಬೇಕಾದರೆ ನಮ್ಮ ಭಾಷೆ, ಸಂಸ್ಕೃತಿ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಅದೇ ರೀತಿ ನಮ್ಮ ಆಚಾರ ವಿಚಾರಗಳುವೈಜ್ಞಾನಿಕ ಹಿನ್ನಲೆಯುಳ್ಳದಾಗಿದೆ. ಯಾವುದು ಮೂಢನಂಬಿಕೆ ಅಲ್ಲ ಎಂಬುದಾಗಿ ಹೇಳಿದರು.
ವಿದ್ಯಾರ್ಥಿಗಳೆಲ್ಲರು ಹೋಮಕುಂಡಕ್ಕೆ ಹವಿಸ್ಸನ್ನು ಅರ್ಪಿಸಿ ಹಿರಿಯರ ಆಶೀರ್ವಾದವನ್ನು ಪಡೆದುಕೊಂಡರು.ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ವೆಂಕಟ್ರಮಣ ರಾವ್ ಮಂಕುಡೆ, ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಕಡಬ, ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ, ಪ್ರೌಢ ವಿಭಾಗದ ಮುಖ್ಯಸ್ಥೆ ಶೈಲಶ್ರೀ ಉಪಸ್ಥಿತರಿದ್ದರು.ಆಡಳಿತ ಮಂಡಳಿ ಸದಸ್ಯರಾದ ಪುಲಸ್ತ್ಯ ರೈ, ಲಿಂಗಪ್ಪ ಜೆ, ಶಿವಪ್ರಸಾದ್ ಮೈಲೇರಿ, ಸುರೇಶ್ ಕಲ್ಲೆಂಬಿ ಉಪಸ್ಥಿತರಿದ್ದರು.
ಸಂಚಲಕರಾದ ವೆಂಕಟ್ರಮಣ ರಾವ್ ಮಂಕುಡೆ ಪ್ರಾಸ್ತವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಕಡಬ ವಂದಿಸಿ, ವಿದ್ಯಾರ್ಥಿನಿ ಅನನ್ಯ ಕಾರ್ಯಕ್ರಮ ನಿರೂಪಿಸಿದರು.

Also Read  ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿರುವ ಗೃಹರಕ್ಷಕರ ಘಟಕದ ಕಚೇರಿಯಲ್ಲಿ ಕುಂದು ಕೊರತೆ ಸಭೆ

 

 

error: Content is protected !!
Scroll to Top