(ನ್ಯೂಸ್ ಕಡಬ) newskadaba.com ಸುಳ್ಯ. ಜೂ.28 ಸುಳ್ಯದ ಪ್ರಸಿದ್ಧ ಜ್ಯೋತಿಷಿ ,ಸಾಹಿತಿ ಮತ್ತು ನಿರ್ದೇಶಕ ರಾದ ಹೆಚ್ ಭೀಮರಾವ್ ವಾಷ್ಠರ್ ನಿರ್ದೇಶನದ ‘ಅನುಮಾನ’ ಕಿರು ಚಿತ್ರಕ್ಕೆ ಉಡುಪಿಯಲ್ಲಿ ನಡೆದ ಮೂರನೆ ಕರಾವಳಿ ಚಿತ್ರೋತ್ಸವ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು .ಈ ಕಾರ್ಯಕ್ರಮವನ್ನು ಬೆಂಗಳೂರು ಕರ್ನಾಟಕ ಚಲನ ಚಿತ್ರ ಅಕಾಡೆಮಿ ಮತ್ತು ಉಡುಪಿಯ ದಿಶಾ ಕಮ್ಯುನಿಕೇಶನ್ ಇವರು ಜಂಟಿಯಾಗಿ ಮಾಡಿದರು .ಈ ಚಿತ್ರಕ್ಕೆ ಸಂಗೀತಕ್ಕೆ ಬಂದ ಬೆಸ್ಟ್ ಮ್ಯೂಸಿಕ್ ಅವಾರ್ಡ್ ಪ್ರಶಸ್ತಿಯನ್ನು ತುಳುನಾಡಿನ ಖ್ಯಾತ ಚಿತ್ರ ನಟಿಯರಾದ ಶಿಲ್ಪಾ ಸುವರ್ಣ ಹಾಗೂ ಜೆನ್ನಿಫರ್ ಸ್ನೇಹಾ ರವರು ವಾಷ್ಠರ್ ತಂಡಕ್ಕೆ ನೀಡಿ ಅಭಿನಂದಿಸಿದರು.
ಈ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಚಿತ್ರದ ನಾಯಕ ನಟ ಗುರುಪ್ರಸಾದ್ ,ನಟಿ ಭಾವನ ವಾಷ್ಠರ್ , ಉಜ್ವಲ್ ವಾಷ್ಠರ್ ,ಪ್ರಜ್ವಲ್ ವಾಷ್ಠರ್ ,ಮಂಜು , ಸಂಘಟಕರು ,ನಿರ್ದೇಶಕರೂ ಆದ ಪ್ರಕಾಶ್ ಸುವರ್ಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು .ಈ ಚಿತ್ರವು ಒಂದೇ ದಿನದಲ್ಲಿ ಸುಳ್ಯದಲ್ಲಿ ಚಿತ್ರಿಕರಣ ಗೊಂಡು ನಟರಾಜ್ ಮಾಸ್ಟರ್ ಮತ್ತು ಪೂರ್ಣಿಮಾ ಕೃಷ್ಣ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ . ಅಲ್ಲದೆ ಸುಮಧುರವಾದ ಗೀತೆಯನ್ನು ಅಳವಡಿಸಿದ್ದಾರೆ ಸಾಹಿತಿ ,ಜ್ಯೋತಿಷಿ ಆದ ಭೀಮರಾವ್ ವಾಷ್ಠರ್ ಇವರು .ಅಲ್ಲದೆ ಈ ಕಿರು ಚಿತ್ರವನ್ನು ಯೂ ಟ್ಯೂಬ್ ನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡುವ ಮೂಲಕ ಚಿತ್ರವು ದಾಖಲೆಯನ್ನು ಬರೆದಿದೆ.