ಮರ್ದಾಳ: ವಿಶೇಷ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba ,ಕಡಬ.ಜೂ.27. ಕಡಬ ಸಮುದಾಯ ಆರೋಗ್ಯ ಕೇಂದ್ರ ಕಡಬ, ಪುತ್ತೂರು ಧರ್ಮಪ್ರಾಂತ್ಯದ ಅಧೀನದಲ್ಲಿರುವ ಕರ್ನಾಟಕ ಇಂಟಗ್ರೇಟೆಡ್ ಡೆವಲಪ್ಮೆಂಟ್ ಸೊಸೈಟಿ ಮರ್ದಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆ ಹಾಗೂ ಮರ್ದಾಳದ ಸೈಂಟ್ ಮೇರಿಸ್ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮವು ಮರ್ದಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಮರ್ದಾಳದ ಗ್ರಾಮ ಪಂಚಾಯತ್ ಅಧ್ಯಕ್ಷತೆ ಲಲಿತಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರರೈಸಿದರು. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ|ಅರಣ್ ಕುಮಾರ್ ಮತ್ತು ಸೀನಿಯರ್ ಮಲೇರಿಯಾ ಇನ್ಸ್ಪೆಕ್ಟರ್ ಜಯರಾಮ ಪೂಜಾರಿ ಅವರು ಮಲೇರಿಯಾ ರೋಗ ಮತ್ತು ಇತರ ಸಾಂಕ್ರಾಮಿಕ ರೋಗಗಳು ಹರಡುವ ವಿಧಾನ ಮುಂಜಾಗ್ರತ ಕ್ರಮಗಳು ಮತ್ತು ತಡೆಗಟ್ಟುವಿಕೆಯ ಕುರಿತು ಮಾಹಿತಿ ನೀಡಿದರು.

Also Read  ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿ ಅರೆಸ್ಟ್

ಸೈಂಟ್ ಮೇರಿಸ್ ಪ್ರೌಢಶಾಲೆಯ ಮುಖ್ಯಶಿಕ್ಷಕ ಈಶೋ ಫಿಲಿಪ್, ಮರ್ದಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಶಾಲೆಯ ಮುಖ್ಯಶಿಕ್ಷಕಿ ಶೆಲಿಲಾ ಸನೀಶ್ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಮರ್ದಾಳದ ಪಿಡಿಒ ಶೇಖರ್, ಲೆಕ್ಕಸಹಾಯಕ `ಭುವನೇಂದ್ರಕುಮಾರ್, ಕಿಡ್ಸ್ ಸಂಸ್ಥೆಯ ಯೋಜನಾಧಿಕಾರಿ ಸ್ನೇಹಾ ಕುರಿಯಕೋಸ್, ಕಡಬ ಸಮುದಾಯ ಆರೋಗ್ಯಕೇಂದ್ರದ ಆರೋಗ್ಯ ನಿರೀಕ್ಷಕ ಲಕ್ಷ್ಮಣ ಗೌಡ ಮುಂತಾದವರು ಉಪಸ್ಥಿತರಿದ್ದರು. ಕಿಡ್ಸ್ ಸಂಸ್ಥೆ ಆನಿಮೇಟರ್ ಶಾರದ ಸ್ವಾಗತಿಸಿ, ವಂದಿಸಿದರು. ವಲಯಾಧಿಕಾರಿ ಮನೋಜ್ ಕೋಡಿಂಬಾಳ ನಿರೂಪಿಸಿದರು. ವಿಶೇಷ ಶಾಲೆಯ ಮಕ್ಕಳು ಪ್ರಾರ್ಥನೆ ನೆರವೇರಿಸಿದರು.

 

 

 

error: Content is protected !!
Scroll to Top