(ನ್ಯೂಸ್ ಕಡಬ) newskadaba ,ಕಡಬ.ಜೂ.27. ಕರ್ನಾಟಕ ಇಂಟಗ್ರೇಟೆಟ್ ಡೆವಲಪ್ಮೆಂಟ್ ಸೊಸೈಟಿ (ಕಿಡ್ಸ್) ಯ ಘಟಕ ಪ್ರತಿನಿಧಿಗಳಿಂದ ನಾಯಕತ್ವ ತರಬೇತಿ ಕಾರ್ಯಕ್ರಮ ಮತ್ತು ಕಾರಿತಾಸ್ ಇಂಡಿಯಾ ಸಂಸ್ಥೆಯ ಸಹಯೋಗದೊಂದಿಗೆ ನಡೆಸಲ್ಪಡುವ ಆರೋಗ್ಯ ನೈರ್ಮಲೀಕರಣ ಯೊಜನೆಯ ಸುರಕ್ಷಾ ಕಾರ್ಯಕ್ರಮದ ಉದ್ಘಾಟನೆಯು ಕಡಬದ ಬೆಥನಿ ಆಶ್ರಮದ ಸಭಾಂಗಣದಲ್ಲಿ ನಡೆಯಿತು.
ಕಾರಿತಾಸ್ ಇಂಡಿಯಾ ಸಂಸ್ಥೆಯ ರಾಜ್ಯ ಅಧಿಕಾರಿ ರಾಬರ್ಟ್ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ , 2018 -19ನೇ ಸಾಲಿನಲ್ಲಿ ಸಂಸ್ಥೆಯು ಆರೋಗ್ಯ ನೈರ್ಮಲೀಕರಣಕ್ಕೆ ಪ್ರಾಧ್ಯನತೆ ನೀಡಿ ಯೋಜನೆಯನ್ನು ರೂಪಿಸಲಾಗಿದ್ದು, ಯೋಜನೆಯ ಉದ್ದೇಶ, ಗುರಿ, ಮತ್ತು ನಡೆಸಲ್ಪಡುವ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಿಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ,ನಿರ್ದೇಶಕ ವಂ|ಜಾನ್ ಕುನ್ನತೇತ್ ಅವರು ಪುತ್ತೂರು ಧರ್ಮಪ್ರಾಂತ್ಯದ ಸಮಾಜ ಸೇವಾ ವಿಭಾಗ ಕಿಡ್ಸ್ ಸಂಸ್ಥೆ ಇದೀಗ ನಡೆಸಲ್ಪಡುತ್ತಿರುವ ಕಾರ್ಯಚಟುವಟಿಕೆಗಳು, ಪ್ರಸಕ್ತ ವರ್ಷದಲ್ಲಿ ನಡೆಸಬೇಕಾದ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಸಂಸ್ಥೆಯ ತರಬೇತುದಾರ ವಿಲ್ರೆಡ್ ಅವರು ನಾಯಕತ್ವದ ಕುರಿತು ಮಾಹಿತಿ ನೀಡಿದರು. ಕೇಂದ್ರ ಯೋಜನಾಧಿಕಾರಿಗಳಾದ, ರೋಕಿನಾ, ಸ್ನೇಹಾ, ಶಾಲಿನಿ ಉಪಸ್ಥಿತರಿದ್ದರು .
ಕೇಂದ್ರ ಯೋಜನಾಧಿಕಾರಿ ಅಮಿತಾ ಅವರು ಸ್ವಾಗತಿಸಿ, ವಲಯ ಸಂಯೋಜಕಿ ಅಜಿತಾ ವಂದಿಸಿದರು. ವಲಯಾಧಿಕಾರಿ ಮನೋಜ್ ನಿರೂಪಿಸಿದರು.