ಬಲ್ಯ ಗ್ರಾಮ ಬೀಟ್ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಜೂ.27. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಯ ಗ್ರಾಮ ಜನಸ್ನೇಹಿ ಪೊಲೀಸ್ ಬೀಟ್ ಸಭೆಯು ಜೂ.26ರಂದು ಕುಟ್ರುಪ್ಪಾಡಿ ಗ್ರಾ.ಪಂ.ಸಭಾಭವನದಲ್ಲಿ ಗ್ರಾ.ಪಂ.ಅಧ್ಯಕ್ಷೆ ಜಾನಕಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಡಬ ಠಾಣಾ ಪೊಲೀಸ್ ಸಹಾಯಕ ಉಪನಿರೀಕ್ಷಕ ಚೆಲುವಯ್ಯರವರು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ, ಬೀಟ್ ಪದ್ದತಿ ಬಗ್ಗೆ ವಿವರಿಸಿದ್ದಲ್ಲದೆ, ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಗ್ರಾಮಸ್ಥರ ಸಹಕಾರ ಅತೀ ಅಗತ್ಯವಾಗಿದ್ದು ಯಾವುದೇ ಸಂದರ್ಭದಲ್ಲಿ ಗ್ರಾಮದಲ್ಲಿ ಕಾನೂನುಭಾಹಿರ ಚಟುವಟಿಕೆಗಳು ಯಾ ಅಪರಿಚಿತ ವ್ಯಕ್ತಿಗಳು ಗ್ರಾಮದಲ್ಲಿ ಸುತ್ತಾಡುವುದು ಕಂಡುಬಂದಲ್ಲಿ ಕೂಡಲೇ ಗ್ರಾಮ ಬೀಟ್ ಅಧಿಕಾರಿಗೆ ಅಥವಾ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗಿ ತಿಳಿಸಿದ ಅವರು ಗ್ರಾಮದಲ್ಲಿ ಯಾವುದೇ ಸಮಸ್ಯೆ ಇದ್ದರು ಕೂಡಲೇ ಪೊಲೀಸರನ್ನು ಸಂಪರ್ಕಿಸಬೇಕೆಂದರು.

Also Read  ಪುತ್ತೂರು: ಕೋಳಿ ಫಾರ್ಮ್ ನಲ್ಲಿ ಕೆಲಸಕ್ಕಿದ್ದ ಮಹಿಳೆಯ ಮೇಲೆ ಅತ್ಯಾಚಾರ ➤ ವೀಡಿಯೋ ಮಾಡಿ ಮಹಿಳೆಯ ಪತಿಗೆ ಕಳುಹಿಸಿದ ಆರೋಪಿ

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಆನಂದ ಪೂಜಾರಿ, ಪಂ.ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗಸ್, ಸದಸ್ಯರಾದ ಶಿವಪ್ರಸಾದ್ ಪುತ್ತಿಲ, ಮಹಮ್ಮದಾಲಿ, ತನಿಯಪ್ಪ ಸಂಪಡ್ಕ, ಲಿಂಗಪ್ಪ ಗೌಡ, ಶಿವಪ್ರಸಾದ್ ಮೈಲೇರಿ, ಯಶೋಧ ಪೂವಳ, ಭಾರತಿ, ಪ್ರಮುಖರಾದ ಹರೀಶ್ ಡಿ.ಎಚ್., ತೋಮಸ್ ಬಲ್ಯ, ಕೃಷ್ಣಪ್ಪ ಗೌಡ, ಬಾಲಕೃಷ್ಣ ಗೌಡ, ಜನಾರ್ಧನ ವಿವಿಧ ಸಲಹೆ ಸೂಚನೆಗಳನ್ನು ನೀಡಿದರು. ಪೊಲೀಸ್ ಅಧಿಕಾರಿ ಭರತ್ ಸ್ವಾಗತಿಸಿ, ಗ್ರಾ.ಪಂ.ಸಿಬ್ಬಂದಿ ಅಂಗು ವಂದಿಸಿದರು. ಪಂ.ಸಿಬ್ಬಂದಿ ಜಿತೇಶ್ ಕುಮಾರ್ ಸಹಕರಿಸಿದರು.

 

 

 

 

error: Content is protected !!
Scroll to Top