ವಿಶ್ವದಾದ್ಯಂತ ಜೂನ್ 26ರಂದು ವಿಶ್ವ ಮಾದಕ ದ್ರವ್ಯ ವಿರೋಧಿ ದಿನಾಚರಣೆ

(ನ್ಯೂಸ್ ಕಡಬ) newskadaba.com ಜೂ.25. ‘ಮತ್ತು ತಂದೀತು ಜೀವಕೇ’ ಕುತ್ತು ವಿಶ್ವದಾದ್ಯಂತ ಜೂನ್ 26ರಂದು ವಿಶ್ವ ಮಾದಕ ದ್ರವ್ಯ ವಿರೋಧಿ ದಿನ ಎಂದು ಆಚರಿಸಲಾಗುತ್ತದೆ. 1987 ರಲ್ಲಿ ಆರಂಭವಾದ ಈ ಆಚರಣೆ, ಜಗತ್ತಿನಾದ್ಯಂತ ‘ಮಾದಕ ದ್ರವ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಅದರ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಿ ಮಾದಕ ವ್ಯಸನಿಗಳನ್ನು ವ್ಯಸನಮುಕ್ತಗೊಳಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಗುರುತರವಾದ ಉದ್ದೇಶವನ್ನು ಹೊಂದಿದೆ. ಒಂದು ಅಂದಾಜು ಮೂಲದ ಪ್ರಕಾರ ಸುಮಾರು 200 ಮಿಲಿಯನ್ ಮಂದಿ ಜಗತ್ತಿನೆಲ್ಲೆಡೆ ಮಾದಕ ದ್ರವ್ಯ ವ್ಯಸನದಿಂದ ಬಳಲುತ್ತಿದ್ದಾರೆ ಮತ್ತು ಜಾಗತಿಕವಾಗಿ ಮಾದಕ ದ್ರವ್ಯಗಳಿಗಾಗಿ ಬಳಸುವ ವೆಚ್ಚ ವರ್ಷವೊಂದರಲ್ಲಿ 1,36,500 ಮಿಲಿಯನ್ ಡಾಲರ್ ಎಂದು ತಿಳಿದು ಬಂದಿದೆ. 

ಅಫೀಮು, ಕೊಕೈನ್, ಹೆರೋಯಿನ್, ಮಾರಿಜುವಾನಾ ಮುಂತಾದ ಮಾದಕ ದ್ರವ್ಯಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದ್ದು, ಇದರ ದುಷ್ಪರಿಣಾಮಗಳ ಅರಿವಿದ್ದೂ, ಯುವಜನತೆ ಮಾದಕ ದ್ರವ್ಯಗಳ ಚಟಕ್ಕೆ ದಾಸರಾಗಿ ಸರ್ವಸ್ವವನ್ನೂ ಕಳೆದುಕೊಂಡು ಅನಾರೋಗ್ಯದ ಹಂದರವಾಗಿ ಸಮಾಜಕ್ಕೆ, ಕುಟುಂಬಕ್ಕೆ ಹೊರೆಯಾಗುವುದೇ ಆಧುನಿಕ ಜಗತ್ತಿನ ಕುಚೋಧ್ಯವೇ ಸರಿ. 2015ರ ವಿಶ್ವ ಮಾದಕ ದ್ರವ್ಯ ವಿರೋಧಿ ದಿನ ದ ಧ್ಯೇಯವಾಕ್ಯ ಏನೆಂದರೆ ನಾವು ನಮ್ಮ ಜೀವನ, ಸಮುದಾಯ ಮತ್ತು ವ್ಯಕ್ತಿತ್ವವನ್ನು ಮಾದಕ ದ್ರವ್ಯದ ಸಹಾಯವಿಲ್ಲದೇ ರೂಪಿಸಿಕೊಳ್ಳೋಣ ಎಂಬುದಾಗಿದೆ.
2018ರ ಧ್ಯೇಯವಾಕ್ಯ ‘ಮೊದಲು ಆಲಿಸಿ’  ಎಂಬುದಾಗಿದೆ. ಇದರಂತೆ ಮಕ್ಕಳು ಮತ್ತು ಯುವಕರನ್ನು ಮಾದಕ ದ್ರವ್ಯ ಮತ್ತು ಇತರ ಔಷದಿಗಳ ದುರುಪಯೋಗ ಮತ್ತು ದುಷ್ಪರಿಣಾಮದ ಬಗ್ಗೆ ತಿಳಿ ಹೇಳಿ ಮಾಧಕ ದ್ರವ್ಯದ ಜಾಲಕ್ಕೆ ಬಲಿಯಾಗದಂತೆ ತಡೆಯುವ ಸದುದ್ದೇಶ ಹೊಂದಿದೆ.

Also Read  ಪುತ್ತೂರು: ಬಿಜೆಪಿ ನಾಯಕರ ಫೋಟೋಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ➤ ಚಪ್ಪಲಿ ಹಾರ ಹಾಕಿ ಬ್ಯಾನರ್ ಅಳವಡಿಕೆ

 

 

 

error: Content is protected !!
Scroll to Top