ಮಿಹ್ ರಜಾನುಲ್ ಬಿದಾಯ: ಹಿದಾಯತುಲ್ ಇಸ್ಲಾಂ ಮದರಸ ಬೆಳ್ಳಾರೆ ಮದರಸ ಪ್ರಾರಂಭೋತ್ಸವ

(ನ್ಯೂಸ್ ಕಡಬ)newskadaba.com ಬೆಳ್ಳಾರೆ,ಜೂ.23. ಪ್ರಸಕ್ತ ಶೈಕ್ಷಣಿಕ ವರುಷದ 2018-19 ನೇ ಸಾಲಿನ ಹಿದಾಯತುಲ್ ಇಸ್ಲಾಂ ಮದರಸದ ಪ್ರಾರಂಭೋತ್ಸವವು  ಇಂದು ನಡೆಯಿತು.
ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಮುದರ್ರಿಸರಾದ ತಾಜುದ್ದೀನ್ ರಹ್ಮಾನಿ ದರ್ಗಾ ಝಿಯಾರತಿನೊಂದಿಗೆ ಚಾಲನೆ ನೀಡಿ,ಶೈಕ್ಷಣಿಕ ವರುಷದ ಉದ್ಘಾಟನೆಯನ್ನು ನೆರವೇರಿಸಿ,ಬಳಿಕ ಪ್ರಾಸ್ತವಿಕ ಮಾತುಗಳನ್ನಾಡಿ ದುಆ ಕೆ ನೇತೃತ್ವವನ್ನು ನೀಡಿದರು .ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಉಪಾಧ್ಯಕ್ಷ ರಾದ ಯು ಹೆಚ್ ಅಬೂಬಕ್ಕರ್ ಅಧ್ಯಕ್ಷ ತೆ ವಹಿಸಿದ್ದರು .ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದ ಸದರ್ ಮುಅಲ್ಲಿಂ ಮಹಮ್ಮದ್ ಮುಸ್ಲಿಯಾರ್ ಮುಂಡೋಳೆ ಸ್ವಾಗತಿಸಿ ,ಮಕ್ಕಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು.

Also Read  ಗೂನಡ್ಕ: ಗ್ರಾಮ ಪಂಚಾಯತ್ ಚುನಾವಣೆ ಹಿನ್ನಲೆ ➤ ಕೆಪಿಸಿಸಿ ಕಾನೂನು ಹಾಗೂ ಮಾನವ ಹಕ್ಕು ವಿಭಾಗದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಭೇಟಿ

ಉಸ್ತಾದರಾದ ಝೈನುದ್ದೀನ್ ಮುಸ್ಲಿಯಾರ್ ಪ್ರಭಾಷಣ ಗೈದರು. ಸುಲೈಮಾನ್ ಮುಸ್ಲಿಯಾರ್ ಮಾಡಾವು ,ಶೂಬಿಝ್ ಅಬೂಬಕ್ಕರ್ ಹಾಜಿ ,ಪುತ್ತುಂಞ ಹಾಜಿ ,ಬೆಳ್ಳಾರೆ ಝಕರಿಯಾ ಜುಮಾ ಮಸೀದಿಯ ಜೊತೆ ಕಾರ್ಯದರ್ಶಿ ಬಶೀರ್ ಕಲ್ಲಪಣೆ ,ಮಸೀದಿ ಯ ಸದಸ್ಯರು ಗಳಾದ ಬಿ ಎ ಬಶೀರ್ ,ಯು ಪಿ ಬಶೀರ್ ಉಪಸ್ಥಿತರಿದ್ದರು.
ಅಲ್ಲದೆ ವಿದ್ಯಾರ್ಥಿ ಗಳ ಹೆತ್ತವರು,ಪೋಷಕರು ,ಮದರಸದ ವಿದ್ಯಾರ್ಥಿಗಳು ಹಾಜರಿದ್ದರು.ಹಸೈನಾರ್ ಮುಸ್ಲಿಯಾರ್ ಅಜ್ಜಾವರ ಧನ್ಯವಾದಗೈದರು.

 

 

error: Content is protected !!
Scroll to Top