ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಪುತ್ತೂರು: ನಾಯಿಯ ಬಾಯಲ್ಲಿ ಮಗುವಿನ ಮೃತದೇಹ ► ಮೂರು ದಿನಗಳ ಹಿಂದೆ ಮೃತಪಟ್ಟ ಮಗು – News Kadaba

ಪುತ್ತೂರು: ನಾಯಿಯ ಬಾಯಲ್ಲಿ ಮಗುವಿನ ಮೃತದೇಹ ► ಮೂರು ದಿನಗಳ ಹಿಂದೆ ಮೃತಪಟ್ಟ ಮಗು

(ನ್ಯೂಸ್ ಕಡಬ) newskadaba.com ಪುತ್ತೂರು, ಜು.15. ಮೂರು ದಿನಗಳ ಹಿಂದೆ ಮೃತಪಟ್ಟ ನವಜಾತ ಶಿಶುವಿನ ಮೃತದೇಹವನ್ನು ನಾಯಿಯೊಂದು ಕಚ್ಚಿಕೊಂಡು ಹೋದ ಘಟನೆ ಪುತ್ತೂರು ಸರ್ಕಾರಿ ಆಸ್ಪತ್ರೆಯ ಬಳಿ ಶನಿವಾರ ಸಂಜೆ ನಡೆದಿದೆ.

ಸರಕಾರಿ ಆಸ್ಪತ್ರೆಯ ಹಿಂಬದಿಯ ಆವರಣ ಗೋಡೆಯ ಹೊರಗೆ ಬೀದಿ ನಾಯಿಯೊಂದು ಏನನ್ನೋ ಕಚ್ಚಿಕೊಂಡು ಓಡುತ್ತಿರುವುದನ್ನು ಕಂಡ ಸ್ಥಳೀಯರು ನಾಯಿಯನ್ನು ಬೆನ್ನಟ್ಟಿದಾಗ ನಾಯಿಯ ಬಾಯಲ್ಲಿ ಮಗುವಿನ ಮೃತದೇಹ ಕಂಡು ಬಂದಿತ್ತು. ಜನರು ನಾಯಿಯನ್ನು ಓಡಿಸಿದಾಗ ಆಸ್ಪತ್ರೆಯ ಹಿಂಬದಿ ಕಳೇಬರವನ್ನು ಬಿಟ್ಟು ಓಡಿತು. ಹತ್ತಿರ ಹೋಗಿ ಪರಿಶೀಲಿಸಿದಾಗ ಪುಟ್ಟ ಮಗುವಿನ ಮೃತದೇಹ ಕಂಡುಬಂದಿದ್ದು, ಕೈ ಮತ್ತು ಕಾಲು ಕತ್ತರಿಸಲ್ಪಟ್ಟು ಉಳಿದ ಕಳೇಬರವನ್ನು ನಾಯಿ ಬಾಯಲ್ಲಿ ಕಚ್ಚಿ ಅಲೆದಾಡುತ್ತಿತ್ತು. ವಿಷಯ ತಿಳಿದ ಪುತ್ತೂರು ನಗರ ಠಾಣೆಯ ಎಸ್‍ಐ ಓಮನಾ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆಸ್ಪತ್ರೆಯ ವೈದ್ಯರಲ್ಲಿ ವಿಚಾರಿಸಿದಾಗ ಮೂರು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಮಗುವೊಂದು ಮೃತಪಟ್ಟಿದ್ದು, ಆ ಮಗುವಿನ ಕಳೇಬರವನ್ನು ಆಸ್ಪತ್ರೆಯ ಹಿಂದಿರುವ ಶವಾಗಾರದ ಪಕ್ಕದಲ್ಲಿ ಗುಂಡಿ ತೋಡಿ ದಫನ ಮಾಡಲಾಗಿತ್ತು. ಅಲ್ಲಿ ಪರಿಶೀಲಿಸಿದಾಗ ಶವ ದಫನ ಮಾಡಿದ ಹೊಂಡವನ್ನು ನಾಯಿಯು ಕೊರೆದು ಮೃತದೇಹವನ್ನು ಎತ್ತಿಕೊಂಡು ಬಂದಿರುವುದು ಕಂಡುಬಂದಿದೆ.

Scroll to Top