(ನ್ಯೂಸ್ ಕಡಬ)newskadaba.com ಕಡಬ,ಜೂ.22.ವಿವೇಕಾನಂದ ಆಯುರ್ವೆದ ಆಸ್ಪತ್ರೆ ಪುತ್ತೂರು, ವಿವೇಕಾನಂದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಪುತ್ತೂರು ಹಾಗೂ ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳು ಕಡಬ ಇದರ ಸಹ ಆಯೋಗದಲ್ಲಿ ವಿಶ್ವ ಯೋಗ ದಿನವನ್ನು ಸರಸ್ವತೀ ವಿದ್ಯಾಲಯ ಪ್ರಾಥಮಿಕ ವಿಭಾಗದ ವತಿಯಿಂದ ಶ್ರೀ ಲಕ್ಷ್ಮಿ ಜನಾರ್ಧನ ದೇವಾಸ್ಥಾನ ಕೇಪು ಇಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಲಕ್ಷ್ಮಿ ಜನಾರ್ಧನ ದೇವಾಸ್ಥಾನದ ಆರ್ಚಕರಾದ ಶ್ರೀ ಗೋವಿಂದ ರಾಜ್ ಭಟ್ ಇವರು ವಹಿಸಿದರು.
ಅತಿಥಿಗಳಾಗಿ ಶಿಶು ಮಂದಿರದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ದಯಾನಂದ ಪುರಿಯ ಹಾಗೂ ಚಿದಾನಂದ ಗೌಡ ಕೊಯೆಕ್ಕೂರಿ ಕಾರ್ಯದಶರ್ಿಗಳು ಶ್ರೀ ಲಕ್ಷ್ಮಿ ಜನಾರ್ಧನ ದೇವಾಸ್ಥಾನ, ಜಯಚಂದ್ರ ರೈ ಕುಂಟೋಡಿ ಸದಸ್ಯರು ಪ್ರಾ.ಕೃ.ಪ.ಸಹಕಾರ ಸಂಘ ಹೊಸ್ಮಠ ಇವರು ಉಪಸ್ಥಿತರಿದ್ದರು.ಶ್ರೀಯುತ ಶಿವಪ್ರಸಾದ್ ಮ್ಯಲೇರಿ ಇವರು ಪ್ರಾಸ್ತಾವಿಕ ಮಾತುಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಯುತ ಉಮೇಶ್ ಸಾಯಿರಾಮ್ ಇವರು ಯೋಗದ ಮಹತ್ವವನ್ನು ತಿಳಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಯೋಗಾಸನಗಳ ಪ್ರದರ್ಶನ ನಡೆಯಿತು.
ಈ ಕಾರ್ಯಕ್ರಮದ ನಿರೂಪಣೆಯನ್ನು ಪ್ರೇಮಲತ ಮಾತಾಜಿ ನೇರವೆರಿಸಿ, ಪಂಪಲ ಮಾತಾಜಿಯವರು ಧನ್ಯವಾದ ಮಾಡಿದರು. ಕಾರ್ಯಕ್ರಮದಲ್ಲಿ ಶಾಲಾ ಪೋಷಕರು ಹಾಗೂ ಸ್ಥಳೀಯರು ಭಾಗವಹಿಸಿದ್ದರು.