ಮಾರ್ ಇವಾನಿಯೋಸ್ ಕಾಲೇಜು: ಸ್ಮಾರ್ಟರ್ ಬೋರ್ಡರ್ ತರಬೇತಿ.

(ನ್ಯೂಸ್ ಕಡಬ)newskadaba.com ಕುಂತೂರು,ಜೂ.22. ಇಲ್ಲಿನ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ವೇಣೂರಿನ ವಿದ್ಯೋದಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಸ್ಮಾರ್ಟರ್ ಬೋರ್ಡರ್ ಬಳಕೆಯ ತರಬೇತಿ ನೀಡಲಾಯಿತು.

ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಶ್ರೀ ರಘುನಂದನ್ ಅವರ ನೇತೃತ್ವದಲ್ಲಿ ಸಂಸ್ಥೆಗೆ ಭೇಟಿ ನೀಡಿ ಒಂದು ದಿನದ ಪ್ರಾಯೋಗಿಕ ತರಬೇತಿಯನ್ನು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀಯುತ ಶಿವರಾಮ ಹೆಗ್ಡೆ ಅವರ ಸಹಕಾರದಿಂದ ಅಲ್ಲಿನ ಶಿಕ್ಷಕಿ ಶ್ರೀಮತಿ ಕಾವ್ಯಶ್ರೀ ಅವರು ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡಿದರು.

Also Read  ಮಂಗಳೂರು: ನ.10ರಂದು ಬೆಳಗ್ಗೆ ರಸ್ತೆ ಸಂಚಾರದಲ್ಲಿ ಬದಲಾವಣೆ

 

error: Content is protected !!
Scroll to Top