ಶ್ರೀ ರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ ಯೋಗ ದಿನಾಚರಣೆ

(ನ್ಯೂಸ್ ಕಡಬ)newskadaba.com ನೆಲ್ಯಾಡಿ,ಜೂ.22. ಶ್ರೀ ರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ  ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಜೂನ್ 21ರಂದು ಯೋಗವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದ್ದು ಅದರ ಪ್ರಯುಕ್ತ ಯೋಗ ದಿನಾಚರಣೆಯನ್ನು ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳ ಸಹಯೋಗದೊಂದಿಗೆ ಯೋಗವನ್ನು ಮಾಡುವುದರ ಮೂಲಕ ಆಚರಿಸಲಾಯಿತು.

ಶ್ರೀಮತಿ ಅಶ್ವಿನಿ ಯೋಗದ ಮಹತ್ವ ತಿಳಿಸಿದರು, ಶ್ರೀ ರಾಮ ವಿದ್ಯಾಲಯದ ವತಿಯಿಂದ ಶ್ರೀ ಸುಬ್ರಹ್ಮಣ್ಯ ದೇವಾಲಯ ದೋಂತಿಲ ಹಾಗೂ ಶ್ರೀ ಅಯ್ಯಪ್ಪ ದೇವಾಲಯ ನೆಲ್ಯಾಡಿಯಲ್ಲಿ ಮುಖ್ಯ ಶಿಕ್ಷಕರಾದ ಗಣೇಶ್ ವಾಗ್ಲೆ ಮತ್ತು ಸಹ ಶಿಕ್ಷಕರಾದ ಅನಿಲ್ ಅಕ್ಕಪ್ಪಾಡಿ ನೇತ್ರತ್ವದಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

Also Read  ಮುಂದಿನ 5 ದಿನಗಳು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ➤ ಕರಾವಳಿಯಲ್ಲಿ ಯೆಲ್ಲೋ ಅಲರ್ಟ್‌

 

 

error: Content is protected !!
Scroll to Top