ಕಡಬ: ಸರಸ್ವತೀ ವಿದ್ಯಾಲಯದ ಪ್ರಾಥಮಿಕ ವಿಭಾಗದಲ್ಲಿ ವಿಶ್ವ ಯೋಗ ದಿನಾಚರಣೆ

(ನ್ಯೂಸ್ ಕಡಬ)newskadaba.com ಕಡಬ,ಜೂ.22.ವಿವೇಕಾನಂದ ಆಯುರ್ವೇದ ಆಸ್ಪತ್ರೆ ಪುತ್ತೂರು, ವಿವೇಕಾನಂದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಪುತ್ತೂರು ಹಾಗೂ ಸರಸ್ವತೀ ವಿದ್ಯಾಲಯ ಸಮೂಹ ಸಂಸ್ಥೆಗಳು ಕಡಬ ಇದರ ಸಹ ಆಯೋಗದಲ್ಲಿ ವಿಶ್ವ ಯೋಗ ದಿನವನ್ನು ಸರಸ್ವತೀ ವಿದ್ಯಾಲಯ ಪ್ರಾಥಮಿಕ ವಿಭಾಗದಲ್ಲಿ ಆಚರಿಸಲಾಯಿತು.

ಈ ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಕಿಯಾದ ಶ್ರೀಮತಿ ವೀರಮ್ಮ ಇವರು ಉದ್ಘಾಟಿಸಿ, ಯೋಗದ ಅರ್ಥ ಮತ್ತು ಮಹತ್ವವನ್ನು ತಿಳಿಸಿ ಕೊಟ್ಟರು. ಸಂಸ್ಥೆಯ ನಿರ್ದೆಶಕಿಯಾದ ಶ್ರೀಮತಿ ಪುಲಸ್ತ್ಯ ರೈ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥೀಗಳಿಂದ ವಿವಿಧ ಯೋಗಾಸನಗಳ ಪ್ರದರ್ಶನ ನಡೆಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಶ್ರೀಮಾನ್ ಮಾಧವ ಇವರು ಸ್ವಾಗತಿಸಿ, ಉಷಾ ಮಾತಾಜಿ ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಸಂತ ಶ್ರೀಮಾನ್ ಮಾಡಿದರು.

Also Read  ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ಮುಂಗಾರು ಮಳೆ ಸಾಧ್ಯತೆ ➤ ಹವಾಮಾನ ತಜ್ಞರಿಂದ ಮುನ್ಸೂಚನೆ

 

error: Content is protected !!
Scroll to Top