ಕಡಬ: ಸರಸ್ವತೀ ವಿದ್ಯಾಲಯದಲ್ಲಿ ವಿಶ್ವಯೋಗ ದಿನ ಆಚರಣೆ

(ನ್ಯೂಸ್ ಕಡಬ)newskadaba.com ಕಡಬ,ಜೂ.22. ಸರಸ್ವತೀ ವಿದ್ಯಾಲಯ ಪ್ರೌಢವಿಭಾಗ ಹಾಗೂ ಪದವಿಪೂರ್ವ ವಿಭಾಗಗಳು ಜಂಟಿಯಾಗಿ ವಿಶ್ವಯೋಗ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮವನ್ನು ನಾಡೋಳಿ ಡಯಾಗ್ನಾಸ್ಟಿಕ್ ಸೆಂಟರ್ ಕಡಬ ಇದರ ಮಾಲಕರಾದ ಕಾಶಿನಾಥ್ ಗೋಗಟೆ ಇವರು ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದರು. ಅವರು ಯೋಗ ಜೀವನದಲ್ಲಿ ಆರೋಗ್ಯ ಮತ್ತು ಶಿಸ್ತನ್ನು ಕಾಪಾಡಲು ಸಹಕಾರಿಯಾಗಿದೆ. ಆದುದರಿಂದ ದಿನನಿತ್ಯ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಿ ಎಂದರು, ಅದೇ ರೀತಿ ಸಂಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಸಂಚಾಲಕರಾದ ವೆಂಕಟ್ರಮಣ ರಾವ್ ಮಂಕುಡೆ ಇವರು ಮಾತನಾಡಿ ಮಾನವ ಜನ್ಮಕ್ಕೆ ಶರೀರ ಅಮೂಲ್ಯವಾದ ಸಂಪತ್ತು ನಮ್ಮ ದಿನನಿತ್ಯದ ಪ್ರತಿಯೊಂದು ಸಾಧನೆಗೂ ಶರೀರವೇ ಮುಖ್ಯ ಕಾರಣವಾಗಿದೆ. ಆದರೆ ಇಂದು ಈ ಶರೀರ ಹಲವಾರು ರೋಗಗಳಿಂದ ತುಂಬಿದೆ. ಈ ಶರೀರವನ್ನು ಸ್ವಸ್ಥ ಶರೀರವನ್ನಾಗಿಸಬೇಕಾದರೆ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು.ಇದರಿಂದ ಆರೋಗ್ಯ ವೃದ್ಧಿಸುತ್ತದೆ ಎಂದರು.

ವೇದಿಕೆಯಲ್ಲಿ ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಮಹೇಶ್ ನಿಟಿಲಾಪುರ, ಪ್ರೌಢ ವಿಭಾಗದ ಮುಖ್ಯಗುರುಗಳಾದ ಶೈಲಶ್ರೀ ರೈ ಉಪಸ್ಥಿತರಿದ್ದರು. ಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು, ಸೂರ್ಯನಮಸ್ಕಾರ, ತಾಡಾಸನ, ತ್ರಿಕೋನಾಸನ, ಭುಜಂಗಾಸನ, ಸುಪ್ತ ವಜ್ರಾಸನ, ಮುಂತಾದ ಆಸನಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿ ದುರ್ಗಾಪ್ರಸಾದ್ ಸ್ವಾಗತಿಸಿ, 10ನೇ ತರಗತಿ ವಿದ್ಯಾರ್ಥಿ ಗುರುಚರಣ್ ವಂದಿಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಕೆ ಕಾರ್ಯಕ್ರಮ ನಿರೂಪಿಸಿದರು.

 

error: Content is protected !!
Scroll to Top