ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ► ಸುಳ್ಯದ ವೀಸಾ ಏಜೆಂಟ್ ವಿರುದ್ಧ ದೂರು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ.22. ಮಲೇಷಿಯಾದಲ್ಲಿ ಉದ್ಯೋಗ ಕೊಡುವುದಾಗಿ ನಂಬಿಸಿ ಹಣ ತೆಗೆದುಕೊಂಡು ಕೆಲಸ ಕೊಡಿಸದೆ ವಂಚಿಸಿದ ಬಗ್ಗೆ ಸಂಸ್ಥೆಯೊಂದರ ವಿರುದ್ಧ ವ್ಯಕ್ತಿಯೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸುಳ್ಯ ತಾಲೂಕು ಸುಳ್ಯ ಕಸಬಾ ಗ್ರಾಮದ ಪ್ಲಾಟಿನ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸರ್ಟಿಸ್ ಸಿಸ್ಕೋ ಕನ್ಸಲ್ಟಂಟ್ಸ್ ಸಂಸ್ಥೆಯ ಅಮರ್ಜಿತ್ (47)ಎಂಬವರು ಉದ್ಯೋಗಕ್ಕಾಗಿ ವೀಸಾ ಮಾಡಿಸಿ ಮಲೇಶಿಯಾಕ್ಕೆ ಕಳುಹಿಸಿ ಕೊಡುತ್ತೇನೆಂದು ಹೇಳಿ 75 ಸಾವಿರ ರೂ. ಹಣವನ್ನು ಮತ್ತು ಪಾಸ್ ಪೋರ್ಟ್ ಅನ್ನು ತೆಗೆದುಕೊಂಡು ಕೆಲಸ ಕೊಡಿಸದೆ ನಂಬಿಸಿ ಮೋಸ ಮಾಡಿದ್ದಲ್ಲದೆ, ಇದೇ ರೀತಿ ಇತರ ಹಲವರನ್ನು ನಂಬಿಸಿ ಮೋಸ ಮಾಡಿರುತ್ತಾರೆ ಎಂದು ಪೊನ್ನಮ್ಮ ಮುರುಗೇಶ್ ಎಂಬವರು ನೀಡಿದ ದೂರಿನಂತೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಾರಿನ ಮೇಲೆ ಬೃಹತ್ ಜಾಹೀರಾತು ಫಲಕ ➤ತಾಯಿ - ಮಗಳು ಮೃತ್ಯು

error: Content is protected !!
Scroll to Top