ಮ0ಗಳೂರು: ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ

(ನ್ಯೂಸ್ ಕಡಬ)newskadaba.com ಮ0ಗಳೂರು, ಜೂನ್. 21.ಮಂಗಳೂರು ತಾಲೂಕು ಕೃಷಿ ಇಲಾಖೆ ವತಿಯಿಂದ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ -ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಅಡಿಯಲ್ಲಿ ಮಂಗಳೂರು ತಾಲೂಕಿನ ವಿವಿಧ ಹೋಬಳಿಗಳಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮಂಗಳೂರು ಬಿ. ಹೋಬಳಿ ಮಟ್ಟದ ಕಾರ್ಯಕ್ರಮದ ಉದ್ಘಾಟನೆಯನ್ನು  ಇಂದು  ಬೆಳಿಗ್ಗೆ 10.30 ಗಂಟೆಗೆ ಪಾವೂರು ಗ್ರಾಮ ಪಂಚಾಯತ್‍ನಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ. ಖಾದರ್ ಅವರು ಉದ್ಘಾಟಿಸಲಿದ್ದಾರೆ.

ಮಂಗಳೂರು ತಾಲೂಕಿನಲ್ಲಿ  ಇಂದಿನಿಂದ ರಿಂದ ಜುಲೈ 5 ರವರೆಗೆ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ವೇಳಾ ಪಟ್ಟಿ ಇಂತಿವೆ. ಜೂನ್ 21 ರಿಂದ 23 ಮಂಗಳೂರು -ಬಿ ಹೋಬಳಿ, 24 ರಿಂದ 26 ರವರೆಗೆ ಸುರತ್ಕಲ್ ಹೋಬಳಿ, 27 ರಿಂದ 29 ರವರೆಗೆ ಮುಲ್ಕಿ ಹೋಬಳಿ, ಜೂನ್ 30 ರಿಂದ ಜುಲೈ 2 ರವರೆಗೆ ಗುರುಪುರ ಹೋಬಳಿ, ಜುಲೈ 3 ರಿಂದ 5 ರವರೆಗೆ ಮೂಡಬಿದ್ರೆ ಹೋಬಳಿಗಳಲ್ಲಿ ಕೃಷಿ ಅಭಿಯಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Also Read  ಮನೆಯಲ್ಲಿದ್ದ ಅಡಿಕೆ ಚೀಲವನ್ನು ಕದ್ದೊಯ್ದ ಪಕ್ಕದ ಮನೆಯಾತ ➤ ಪೊಲೀಸರಿಗೆ ದೂರು

 

error: Content is protected !!
Scroll to Top