ಮಂಗಳೂರು: ಸ್ವಚ್ಛ ಸಂಭ್ರಮ-ರೇಡಿಯೋ ಕಾರ್ಯಕ್ರಮ

(ನ್ಯೂಸ್ ಕಡಬ)newskadaba.com ಮ0ಗಳೂರು,ಜೂನ್.20. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಬಯಲು ಬಹಿರ್ದೆಸೆ ಮುಕ್ತಗೊಂಡ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ “ನೈರ್ಮಲ್ಯ ಮತ್ತು ಶುಚಿತ್ವದಡಿ” ನಿರಂತರತೆಯನ್ನು ಕಾಯ್ದುಕೊಳ್ಳಲು “ನಮ್ಮ ತ್ಯಾಜ್ಯ ನಮ್ಮ ಹೊಣೆ” ಪರಿಕಲ್ಪನೆಯಲ್ಲಿ ಜನಸಾಮಾನ್ಯರಲ್ಲಿ ಜನ ಜಾಗೃತಿ ಮೂಡಿಸಲು 2017-18 ನೇ ಸಾಲನ್ನು ಸ್ವಚ್ಛತಾ ವರ್ಷಾಚರಣೆಯನ್ನಾಗಿ ಆಚರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆ/ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ/ಮಾಹಿತಿ ನೀಡಲು “ಸ್ವಚ್ಛ ಸಂಭ್ರಮ” ರೇಡಿಯೋ ಕಾರ್ಯಕ್ರಮವನ್ನು 2018 ರ ಜನವರಿ ತಿಂಗಳಿನಿಂದ ಏಪ್ರಿಲ್ ತಿಂಗಳವರೆಗೆ ಪ್ರಸಾರಗೊಂಡಿರುತ್ತದೆ.
ಈ ಸ್ವಚ್ಛ ಸಂಭ್ರಮ ಕಾರ್ಯಕ್ರಮದ ಕೊನೆಯ ಪ್ರಸಾರದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸ್ಪರ್ಧೆಗಳನ್ನು ಏರ್ಪಡಿಸಿ ಬಿತ್ತರಿಸಲಾಗಿದೆ. “ನಮ್ಮ ತ್ಯಾಜ್ಯ ನಮ್ಮ ಹೊಣೆ” ಪರಿಕಲ್ಪನೆಯಲ್ಲಿ “ಸ್ವಚ್ಛ ಸಂಭ್ರಮ” ಕಾರ್ಯಕ್ರಮದಲ್ಲಿ ಸ್ವಚ್ಛತೆಗೆ ಸಂಬಂಧಿಸಿದ ಹಾಡನ್ನು ರಚನೆ ಮತ್ತು ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಚಿನ್ಮಯಿ, ದ್ವೀತಿಯ ಸ್ಥಾನವನ್ನು ಲವಿಟಾ, ಹಾಗೂ ತೃತಿಯ ಸ್ಥಾನವನ್ನು ಪ್ರತಿಜ್ಞಾ ಇವರು ಪಡೆದಿರುತ್ತಾರೆ.

Also Read  ಕಾಸರಗೋಡು: ಟೆಂಪೊ-ಬೈಕ್ ಢಿಕ್ಕಿ; ಯುವಕ ಮೃತ್ಯು

ಹಾಗೂ ಸ್ವಚ್ಛತಾ ಘೋಷವಾಕ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಜಯಶ್ರೀ, ದ್ವೀತಿಯ ಸ್ಥಾನವನ್ನು ಪ್ರವೀಣ್ ಅಂಬಳ ಇವರು ಪಡೆದಿರುತ್ತಾರೆ. ವಿಜೇತರಿಗೆ ಜೂನ್ 22 ರಂದು ಪೂರ್ವಾಹ್ನ 11 ಗಂಟೆಗೆ ದ.ಕ ಜಿಲ್ಲಾ ಪಂಚಾಯತಿನ ನೇತ್ರಾವತಿ ಸಭಾಂಗಣದಲ್ಲಿ ನಡೆಯುವ ನೈರ್ಮಲ್ಯ ಕುರಿತು ಋತುಸ್ರಾವ ಜಾಗೃತಿ ಅಭಿಯಾನ ಹಾಗೂ ತ್ಯಾಜ್ಯ ನಿರ್ವಹಣೆಯ “ಸ್ವಚ್ಛ ಗೆಳತಿ” ಎಂಬ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಗುವುದು.
ಎಂದು ಜಿಲ್ಲಾ ಸಂಯೋಜಕರು, ಸ್ವಚ್ಛ ಭಾರತ್ ಮಿಷನ್, ಜಿಲ್ಲಾ ನೆರವು ಘಟಕ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇವರು ತಿಳಿಸಿದರೆ.

Also Read  ಮೈಸೂರು: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮೃತ್ಯು

 

error: Content is protected !!
Scroll to Top