ಮಂಗಳೂರು: ಲಕ್ಷ್ಮಣ ಮಲ್ಲೂರುರವರಿಗೆ ತುಳು ಅಕಾಡೆಮಿಯಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂನ್. 20. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಪ್ರತಿ ತಿಂಗಳ ಚಾವಡಿ ಕಾರ್ಯಕ್ರಮದಲ್ಲಿ ಒಬ್ಬ ಸಾಧಕರನ್ನು ಸನ್ಮಾನಿಸಲು ಉದ್ದೇಶಿಸಿದೆ.ಪ್ರಥಮ ಚಾವಡಿ ಸನ್ಮಾನ ಜೂನ್ 23 ರಂದು ನಡೆಯಲಿದ್ದು ತುಳು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದ ಮೇರು ಕಲಾವಿದ ಶ್ರೀ ಲಕ್ಷ್ಮಣ ಕುಮಾರ್ ಮಲ್ಲೂರುರವರನ್ನು ಸನ್ಮಾನಿಸಲಾಗುವುದು. ಕಳೆದ 4 ದಶಕಗಳಿಂದ ತುಳುರಂಗಭೂಮಿಯಲ್ಲಿ ನಟರಾಗಿ, ನಾಟಕ ರಚನೆಕಾರರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಇವರು ಹಲವಾರು ತುಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಪ್ರಥಮ ಚಾವಡಿ ಸನ್ಮಾನ ಜೂನ್ 23 ರಂದು ನಡೆಯಲಿದ್ದು ತುಳು ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದ ಮೇರು ಕಲಾವಿದ ಶ್ರೀ ಲಕ್ಷ್ಮಣ ಕುಮಾರ್ ಮಲ್ಲೂರುರವರನ್ನು ಸನ್ಮಾನಿಸಲಾಗುವುದು.
ಕಳೆದ 4 ದಶಕಗಳಿಂದ ತುಳುರಂಗಭೂಮಿಯಲ್ಲಿ ನಟರಾಗಿ, ನಾಟಕ ರಚನೆಕಾರರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಇವರು ಹಲವಾರು ತುಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

Also Read  ಸಂಜೀವಿನಿ ಗುರುಶ್ರೀ ಸ್ವ-ಸಹಾಯ ಸಂಘ ಇತ್ರಾಡಿ ವತಿಯಿಂದ ಸಂಘದ ವಿಜೇತ ಗ್ರಾ.ಪಂ. ಅಭ್ಯರ್ಥಿ ಶ್ರೀಮತಿ ಮೀನಾಕ್ಷಿಯವರಿಗೆ ಸನ್ಮಾನ

ನಾಟಕ ಕಲಾವಿದರ ಒಕ್ಕೂಟದ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿರುವ ಇವರು ತುಳುರಂಗಭೂಮಿ ಚಲನಚಿತ್ರ ಕ್ಷೇತ್ರದಲ್ಲಿ ಹಲವಾರು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಉತ್ತಮವಾದ ವಾಗ್ಮಿಯಾಗಿಯೂ ಗುರುತಿಸಿದ್ದಾರೆ.
ಚಾವಡಿ ಸನ್ಮಾನ ಕಾರ್ಯಕ್ರಮದಲ್ಲಿ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ. ಸಿ. ಭಂಡಾರಿ ಅಧ್ಯಕ್ಷತೆವಹಿಸಲಿದ್ದು ಖ್ಯಾತ ತುಳು ಚಲನಚಿತ್ರ ನಿರ್ದೇಶಕ ವಿಜಯ ಕುಮಾರ್ ಕೊಡಿಯಲ್‍ಬೈಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾರ್ವಜನಿಕರು ಹಾಗೂ ರಂಗಕಲಾವಿದರು ಈ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಇವರ ಪ್ರಕಟಣೆ ತಿಳಿಸಿದೆ.

 

error: Content is protected !!
Scroll to Top