(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.13. ರಾಜ್ಯದ ಕೆಲವು ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್ ಕೆಜಿ ತರಗತಿಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆಯು ನಿರ್ಧರಿಸಿದೆ ಎಂದು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹೇಳಿದ್ದಾರೆ.
ಸರಕಾರಿ ಶಾಲೆಗಳಲ್ಲಿ ಎಲ್ ಕೆಜಿ ತರಗತಿಗಳ ಅಗತ್ಯವಿದೆ ಎಂದು ಪೋಷಕರ ಬೇಡಿಕೆಯಂತೆ ಸರಕಾರವು ಎಚ್ಚೆತ್ತಿದ್ದು, ಪ್ರಸಕ್ತ ಸಾಲಿನಿಂದಲೇ ರಾಜ್ಯದ 13 ಜಿಲ್ಲೆಗಳ ಸುಮಾರು 100 ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಆರಂಭವಾಗಲಿವೆ. ಎಲ್ ಕೆಜಿ ತರಗತಿಗೆ ನೂತನ ಪಠ್ಯ ಕ್ರಮವನ್ನು ಸಿದ್ಧಪಡಿಸಲಾಗಿದ್ದು, ಸರಕಾರಿ ಶಾಲೆಯ ಸಮೀಪದಲ್ಲಿರುವ ಅಂಗನವಾಡಿಗಳನ್ನು ವಿಲೀನಗೊಳಿಸಲು ಸರಕಾರ ನಿರ್ಧರಿಸಿದೆ. ಅಲ್ಲದೆ ಒಂದು ಶಾಲೆಗೆ ಒಬ್ಬರಂತೆ ಶಿಕ್ಷಕರ ನೇಮಕ ಮಾಡಲಾಗುತ್ತದೆ ಅವರು ವಿವರಿಸಿದರು.
Also Read ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಭೆ ➤ ಕಸ್ತೂರಿ ರಂಗನ್ ವರದಿ ಬಾದಿತ ಗ್ರಾ. ಪಂ ಎದುರು ಧರಣಿ ಸತ್ಯಾಗ್ರಹ.!