(ನ್ಯೂಸ್ ಕಡಬ) newskadaba.com, ಸೆ. 23 . ಕಬಕ: ಸಿರಾಜುಲ್ ಹುದಾ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಸೆಪ್ಟೆಂಬರ್ 20ರಂದು ಸುಲ್ತಾನ್ ನಗರದ ಮಹ್ದನುಲ್ ಉಲೂಮ್ ಮದರಸದಲ್ಲಿ ನಡೆಯಿತು.ಸಂಘದ ಗೌರವಾಧ್ಯಕ್ಷರಾದ ಆರಿಫ್ ಮದನಿ ಉಸ್ತಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘದ ಮುಂದಿನ ಕಾರ್ಯಚಟುವಟಿಕೆಗಳು ಹಾಗೂ ಸಂಘಟನೆಯ ರೂಪುರೇಷೆಗಳ ಕುರಿತು ಚರ್ಚಿಸಿ ಮಾರ್ಗದರ್ಶನ ನೀಡಲಾಯಿತು.

ಅದ್ಯಕ್ಷರು
ಸಭೆಯಲ್ಲಿ ಸಿರಾಜುಲ್ ಹುದಾ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಆರಿಫ್ ಮದನಿ ಅವರು ಮರು ಆಯ್ಕೆಯಾದರು. ಅಧ್ಯಕ್ಷರಾಗಿ ಸಂಶುದ್ದೀನ್, ಪ್ರಧಾನ ಕಾರ್ಯದರ್ಶಿಯಾಗಿ ಉಮ್ಮರ್ ಫಾರೂಕ್, ಖಜಾಂಜಿಯಾಗಿ ಸಲ್ಮಾನ್ ಕಬಕ ಹಾಗೂ ಉಪಾಧ್ಯಕ್ಷರಾಗಿ ಶಾಫಿ ಯು.ಎಸ್. ಆಯ್ಕೆಯಾದರು.

ಕಜಂಜಿ

ಕಾರ್ಯದರ್ಶಿ
ಜೊತೆ ಕಾರ್ಯದರ್ಶಿಗಳಾಗಿ ಫಾಯಿಜ್ ಮತ್ತು ಅಫ್ಲಲ್, ಲೆಕ್ಕಪರಿಶೋಧಕರಾಗಿ ಅನ್ಸಾರ್, ಮಾದ್ಯಮ ವಕ್ತಾರರಾಗಿ ಬದ್ರುದ್ದಿನ್ ಹಾಗೂ ಸದಸ್ಯರಾಗಿ ಫರ್ಸಾನ್, ಫೈರೋಜ್, ಸಬೀಲ್ ಮತ್ತು ಖಾಲಿದ್ ಆಯ್ಕೆಯಾದರು.ಇನ್ನು ಗಲ್ಫ್ ವಿಭಾಗದ ಪದಾಧಿಕಾರಿಗಳಾಗಿ ಸವಾದ್, ಫಾರೂಕ್ ಅಡ್ಯಾಳ್ ಮತ್ತು ಸಂಸೀರ್ ಅವರನ್ನು ಆಯ್ಕೆ ಮಾಡಲಾಯಿತು.ಸಭೆಯಲ್ಲಿ ಸಂಘದ ಮುಂದಿನ ಕಾರ್ಯಯೋಜನೆಗಳು, ಸಂಘಟನಾ ಚಟುವಟಿಕೆಗಳು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ವಿವಿಧ ಕಾರ್ಯಕ್ರಮಗಳ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.




