ಇಂದಿನಿಂದ 3 ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

(ನ್ಯೂಸ್‌ ಕಡಬ) newskadaba.com,  ಸೆ.21 . ರಾಜ್ಯ ವಿಧಾನಮಂಡಲದ 3 ದಿನಗಳ ವಿಶೇಷ ಅಧಿವೇಶನ ಇಂದು ಬೆಳಿಗ್ಗೆ 11 ಗಂಟೆಯಿಂದ ಆರಂಭಗೊಳ್ಳಲಿದೆ.ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ, ಬೆಳೆಹಾನಿ ಪರಿಹಾರ, ಕುಡಿಯುವ ನೀರು, ವಿದ್ಯುತ್ ಹಾಗೂ ಮೇವಿನ ಅಭಾವ ಮತ್ತು ಕಸ್ತೂರಿರಂಗನ್ ವರದಿ ಕರಡು ಅಧಿಸೂಚನೆಯಿಂದ ಕರಾವಳಿ-ಮಲೆನಾಡು ಭಾಗದ ಮೇಲಾಗುವ ಪರಿಣಾಮಗಳ ಕುರಿತು ಗಂಭೀರ ಚರ್ಚೆ ನಡೆಯಲಿದೆ.

ಕಳೆದ ಅಧಿವೇಶನ ಪ್ರತಿಭಟನೆಯಿಂದಾಗಿ ಮೊಟಕುಗೊಂಡಿದ್ದರಿಂದ, ಈ ಬಾರಿ ಬರ ಪರಿಹಾರ ಹಾಗೂ ರೈತರ ಸಾಲಮನ್ನಾಗೆ ವಿಪಕ್ಷಗಳು ಪಟ್ಟು ಹಿಡಿಯುವ ಸಾಧ್ಯತೆಯಿದ್ದು, ಆಡಳಿತ ಹಾಗೂ ವಿಪಕ್ಷಗಳ ನಡುವೆ ತೀವ್ರ ಕಾದಾಟ ನಿರೀಕ್ಷಿಸಲಾಗಿದೆ.

Scroll to Top