(ನ್ಯೂಸ್ ಕಡಬ) newskadaba.com, ಆ.24: ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯಡಿ IVF (ಇನ್ ವಿಟ್ರೊ ಫರ್ಟಿಲೈಸೇಶನ್), ICSI ಹಾಗೂ FET ನಂತಹ ಉನ್ನತ ಫಲವತ್ತತೆ ಚಿಕಿತ್ಸೆಗಳನ್ನು ಸೇರಿಸಲಾಗಿದೆ.ಪ್ರಾಯೋಗಿಕವಾಗಿ 1 ವರ್ಷದ ಅವಧಿಗೆ 120 ಬಿಪಿಎಲ್ (BPL) ಹಾಗೂ ಆದ್ಯತಾ (PHH) ಪಡಿತರ ಚೀಟಿದಾರ ಕುಟುಂಬಗಳಿಗೆ ಈ ಉಚಿತ ಸೌಲಭ್ಯ ಲಭ್ಯವಾಗಲಿದೆ.
ಬಂಜೆತನದಿಂದ ನ ಬಳಲುತ್ತಿರುವ, ದುಬಾರಿ ಚಿಕಿತ್ಸೆ ಪಡೆಯಲು ಸಾಧ್ಯವಾಗದ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವುದು…ಪ್ರಾಯೋಗಿಕ ಹಂತದ ಯಶಸ್ಸನ್ನು ಆಧರಿಸಿ ಮುಂದಿನ ದಿನಗಳಲ್ಲಿ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸುವ ಸಾಧ್ಯತೆಯಿದೆ.








