ಒಂದೇ ದಿನದ ಅಂತರದಲ್ಲಿ ಹಸೆಗೆರೆಯಬೇಕಿದ್ದ ಯುವ ಜೋಡಿ ಆತ್ಮಹತ್ಯೆಗೆ ಶರಣು! ಭಾವಿ ಪತ್ನಿಯ ಸಾವು ತಾಳಲಾರದೆ ಯುವಕನೂ ಆತ್ಮಹತ್ಯೆ



(ನ್ಯೂಸ್‌ ಕಡಬ) newskadaba.com,  ಆ.13 : ಮದುವೆಯ ಸಂಭ್ರಮಕ್ಕೆ ಸಿದ್ಧವಾಗಬೇಕಿದ್ದ ಯುವ ಜೋಡಿಯ ಬದುಕು ದುರಂತದಲ್ಲಿ ಅಂತ್ಯಗೊಂಡಿದೆ. ಎಸ್‌ಬಿಐ ಉದ್ಯೋಗಿಯಾಗಿದ್ದ ಯುವತಿ ಅನುಶ್ರೀ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಆಕೆಯ ಭಾವಿ ಪತಿ ಅಮಲ್ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.







ಅನುಶ್ರೀ ಹುಣಸೂರಿನ ಎಸ್‌ಬಿಐ ಶಾಖೆಯಲ್ಲಿ, ಅಮಲ್ ಎರ್ನಾಕುಳಂನ ಎಸ್‌ಬಿಐ ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮುಂದಿನ ವರ್ಷ ಡಿಸೆಂಬರ್ 26ರಂದು ಇವರ ವಿವಾಹ ನಿಗದಿಯಾಗಿತ್ತು.ಮಂಗಳವಾರ ಹುಣಸೂರಿನಲ್ಲಿದ್ದ ಅನುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.






ಈ ಸುದ್ದಿ ತಿಳಿದ ಬಳಿಕ ತೀವ್ರ ಮನನೊಂದ ಅಮಲ್ ಕೂಡ ಕೇರಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.ಒಂದೇ ದಿನದ ಅಂತರದಲ್ಲಿ ಮದುವೆಯಾಗಬೇಕಿದ್ದ ಜೋಡಿ ಶವವಾಗಿ ಪತ್ತೆಯಾಗಿರುವುದು ಎರಡೂ ಕುಟುಂಬಗಳಿಗೆ ಆಘಾತ ತಂದಿದೆ.ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಹುಣಸೂರು ಹಾಗೂ ಕೇರಳ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ

error: Content is protected !!
Scroll to Top