ಬ್ರೇಕಪ್ ಸಿಟ್ಟಿಗೆ ಪ್ರಿಯತಮೆಯ ಭೀಕರ ಹತ್ಯೆ: ಜರ್ಮನಿಯಿಂದ ಭಾರತಕ್ಕೆ ಎಸ್ಕೇಪ್ ಆಗಲು ನೋಡ್ತಿದ್ದ ಆರೋಪಿ ಬಂಧನ



(ನ್ಯೂಸ್‌ ಕಡಬ) newskadaba.com, ಆ.10:ಅರಿಝೋನಾ ವಿಶ್ವವಿದ್ಯಾಲಯದ ಸಮೀಪದ ಅಪಾರ್ಟ್‌ಮೆಂಟ್‌ನಲ್ಲಿ ಕಾಲೇಜು ವಿದ್ಯಾರ್ಥಿನಿ ಜುಲಿಸ್ಸಾ ರೂಬಿ ಸಲಾಜರ್ ಶವವಾಗಿ ಪತ್ತೆಯಾಗಿದ್ದು, ಆಕೆಯ ಪ್ರಿಯಕರ ಭಾರತೀಯ ಮೂಲದ ವರುಣ್ ಬಚ್ಚಿಗಾರಿ ಎಂಬಾತನನ್ನು ಜರ್ಮನಿಯಲ್ಲಿ ಬಂಧಿಸಲಾಗಿದೆ.







ಸಲಾಜರ್ ಮೇಲೆ ವರುಣ್ ನಿರಂತರ ಹಲ್ಲೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಆಕೆ ಆತನಿಂದ ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಕೊಲೆಗೂ ಮುನ್ನ ಆಕೆಯ ಕೊಠಡಿಯಿಂದ ಕಿರುಚಾಟ ಕೇಳಿಸಿತ್ತು ಎಂದು ರೂಮ್‌ಮೇಟ್‌ಗಳು ಮಾಹಿತಿ ನೀಡಿದ್ದಾರೆ. ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.






ಹತ್ಯೆ ಬಳಿಕ ಯುವತಿಯ ಮೊಬೈಲ್ ಹಾಗೂ ಕ್ರೆಡಿಟ್ ಕಾರ್ಡ್ ಕಳವು ಮಾಡಿದ್ದ ವರುಣ್, ಆಕೆಯ ತಾಯಿಗೆ ನಿರಂತರ ಮೆಸೇಜ್ ಕಳುಹಿಸುತ್ತಿದ್ದ. ಟಕ್ಸನ್ ವಿಮಾನ ನಿಲ್ದಾಣದಿಂದ ಹೂಸ್ಟನ್ ಮೂಲಕ ಬರ್ಲಿನ್‌ಗೆ ತೆರಳಿದ್ದ ಈತ, ಜರ್ಮನಿಯಿಂದ ಭಾರತಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.ವರುಣ್ ಅರಿಝೋನಾ ವಿವಿಯಲ್ಲಿ ಬ್ಯುಸಿನೆಸ್ ಅನಾಲಿಟಿಕ್ಸ್ ವಿದ್ಯಾರ್ಥಿಯಾಗಿದ್ದು, ಈ ಹಿಂದೆ ಗಲಾಟೆ ಮತ್ತು ಕೌಟುಂಬಿಕ ದೌರ್ಜನ್ಯದ ಆರೋಪಗಳ ಹಿನ್ನೆಲೆಯಲ್ಲಿ ಆತನನ್ನು ಕಾಲೇಜಿನಿಂದ ವಜಾಗೊಳಿಸಲಾಗಿತ್ತು.

error: Content is protected !!
Scroll to Top