ಮೆಟ್ರೋ ಪ್ರಯಾಣಿಕರಿಗೆ ಶುಭ ಸುದ್ದಿ: ಹಸಿರು ಮಾರ್ಗಕ್ಕೆ ಶೀಘ್ರವೇ 3 ಹೊಸ ರೈಲು ಸೇರ್ಪಡೆ!



(ನ್ಯೂಸ್‌ ಕಡಬ) newskadaba.com,  ಆ.04: ಬೆಂಗಳೂರು ಮೆಟ್ರೋದ ಪ್ರಯಾಣಿಕರ ದಟ್ಟಣೆ ತಗ್ಗಿಸಲು ಹಸಿರು ಮಾರ್ಗಕ್ಕೆ ಈ ತಿಂಗಳಾಂತ್ಯದೊಳಗೆ (ಆಗಸ್ಟ್) 3 ಹೊಸ ರೈಲುಗಳು ಸೇರ್ಪಡೆಯಾಗುವ ನಿರೀಕ್ಷೆಯಿದೆ.







ರೈಲುಗಳು ಅಗತ್ಯ ಆಂತರಿಕ ಸುರಕ್ಷತಾ ಮೌಲ್ಯಮಾಪನ ಪ್ರಮಾಣಪತ್ರ ಪಡೆದಿವೆ. ಮೆಟ್ರೋ ರೈಲ್ವೆ ಸುರಕ್ಷತಾ ಪರಿಶೀಲನೆ ಹಾಗೂ ವಾಣಿಜ್ಯ ಸಂಚಾರಕ್ಕೆ ಅಂತಿಮ ಅನುಮೋದನೆ ದೊರೆತ ತಕ್ಷಣ ಸೇವೆಗೆ ಮುಕ್ತವಾಗಲಿವೆ.ಚೀನಾದ CRRC ಸಂಸ್ಥೆಯು 21 ರೈಲುಗಳನ್ನು ಪೂರೈಸುತ್ತಿದ್ದು, ಪ್ರೊಟೊಟೈಪ್ ರೈಲು ಚೀನಾದಲ್ಲಿ ತಯಾರಾಗಿದೆ. ಉಳಿದ ರೈಲುಗಳನ್ನು ಕೋಲ್ಕತ್ತಾದ ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ನಿರ್ಮಿಸುತ್ತಿದೆ.






ಪ್ರಸ್ತುತ 57 ರೈಲುಗಳಿದ್ದು (ನೇರಳೆ: 33, ಹಸಿರು: 24), ಹೊಸ 3 ರೈಲುಗಳಿಂದ ಒಟ್ಟು ಸಂಖ್ಯೆ 60ಕ್ಕೆ ಏರಿಕೆಯಾಗಲಿದೆ.ಈ ನೂತನ ರೈಲುಗಳು ಅತ್ಯಾಕರ್ಷಕ ಡಿಸೈನ್ ಮತ್ತು ‘ಡೈನಮಿಕ್ ಡಿಸ್‌ಪ್ಲೇ ಬೋರ್ಡ್’ ಒಳಗೊಂಡಿರಲಿವೆ.ಬಾಕಿ ಇರುವ 18 ರೈಲುಗಳು 2027ರ ವೇಳೆಗೆ ಹಂತ-ಹಂತವಾಗಿ ಸೇರ್ಪಡೆಯಾಗಲಿದ್ದು, ಮುಂದೆ ನೇರಳೆ ಮಾರ್ಗಕ್ಕೆ 50 ಹಾಗೂ ಹಸಿರು ಮಾರ್ಗಕ್ಕೆ 28 ರೈಲುಗಳು ಲಭ್ಯವಾಗಲಿವೆ.

error: Content is protected !!
Scroll to Top