ratutogel ratutogel gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 gatsu88 ratutogel ratutogel ratutogel ratutogel ratutogel ratutogel ratutogel ratutogel
ಹಿಂದೂ ಯುವಕನಿಂದ ಮರ್ಧಾಳ ಮಸೀದಿಯಲ್ಲಿ ಇಫ್ತಾರ್ ಕೂಟ ► ಸೌಹಾರ್ದತೆಗೆ ಸಾಕ್ಷಿಯಾದ ಯುವಕನ ಕಾರ್ಯ – News Kadaba

ಹಿಂದೂ ಯುವಕನಿಂದ ಮರ್ಧಾಳ ಮಸೀದಿಯಲ್ಲಿ ಇಫ್ತಾರ್ ಕೂಟ ► ಸೌಹಾರ್ದತೆಗೆ ಸಾಕ್ಷಿಯಾದ ಯುವಕನ ಕಾರ್ಯ

(ನ್ಯೂಸ್ ಕಡಬ) newskadaba.com ಕಡಬ, ಮೇ.31. ಹಿಂದೂ ಯುವಕನೋರ್ವ ತನ್ನ ಮುಸ್ಲಿಂ ಗೆಳೆಯರಿಗಾಗಿ ಗುರುವಾರದಂದು ಮರ್ಧಾಳ ಮಸೀದಿಯಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿದ್ದು, ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದೆ.

ಮರ್ಧಾಳ ಪೂಜಾರಿ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ಭಗವತೀ ಹೋಟೆಲ್ ಮಾಲಕ ಗೋಪಾಲಕೃಷ್ಣ ಕಳೆದ ಮೂರು ವರ್ಷಗಳಿಂದ ತನ್ನ‌ ಹೋಟೆಲ್‌ನಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸುತ್ತಿದ್ದು, ಈ ವರ್ಷ ಮರ್ಧಾಳ ಮಸೀದಿಯಲ್ಲಿ ಏರ್ಪಡಿಸಿದ್ದಾರೆ. ಗೋಪಾಲಕೃಷ್ಣರವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ. ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಧರ್ಮ ಧರ್ಮಗಳ ನಡುವೆ ವೈರಾಗ್ಯ ಕಂಡುಬರುತ್ತಿದ್ದು, ತಾನು ಸೌಹಾರ್ದತಾ ದೃಷ್ಟಿಯಿಂದ ಕಳೆದ ಮೂರು ವರ್ಷಗಳಿಂದ ಇಫ್ತಾರ್ ಕೂಟವನ್ನು ಆಯೋಜಿಸುತ್ತಿರುವುದಾಗಿ ಗೋಪಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಮರ್ಧಾಳದಲ್ಲಿ ಇಂತಹದೇ ಘಟನೆಗಳು ಈ ಹಿಂದೆಯೂ ಹಲವು ಬಾರಿ‌ ನಡೆದಿತ್ತು. ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಮುಸ್ಲಿಂ ಬಾಂಧವರು ಒಟ್ಟಾಗಿ ಭಾಗವಹಿಸಿದ್ದರು. ಅಲ್ಲದೆ ಈದ್ ಮಿಲಾದ್ ಸಂದರ್ಭದಲ್ಲಿ ಎಲ್ಲಾ ಆಟೋ ಚಾಲಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Scroll to Top