ರಾಜರಾಜೇಶ್ವರಿ ನಗರ ವಿಧಾನ ಸಭಾ ಚುನಾವಣೆ ► ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ 25 ಸಾವಿರ ಮತಗಳ ಅಂತರದಿಂದ ಭರ್ಜರಿ ಗೆಲವು

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.31. ಭಾರೀ ಸಂಖ್ಯೆಯಲ್ಲಿ ವೋಟರ್ ಐಡಿ ಪತ್ತೆಯಾದ ಕಾರಣ ಮುಂದೂಡಲಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ಗುರುವಾರ ಬೆಳಗ್ಗೆ ಆರಂಭವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ 25 ಸಾವಿರ ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮುನಿರತ್ನ 9ನೇ ಸುತ್ತಿನ ಅಂತ್ಯದಲ್ಲಿ 75,282 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ತುಳಸಿ ಮುನಿರಾಜುಗೌಡ 31,182 ಹಾಗೂ ಜೆಡಿಎಸ್‌ನ ಜಿ.ಎಚ್. ರಾಮಚಂದ್ರ 19,509 ಮತಗಳನ್ನು ಪಡೆದಿದ್ದಾರೆ. ಮುನಿರತ್ನ ಗೆಲುವು ಖಚಿತವಾದ ತಕ್ಷಣ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮ ಆಚರಿಸಿಕೊಳ್ಳತೊಡಗಿದ್ದು, 900 ಕ್ಕೂ ಹೆಚ್ಚು ನೋಟಾ ಮತಗಳು ದಾಖಲಾಗಿವೆ.

Also Read  Vavada – ваше надежное интернет-казино!

error: Content is protected !!
Scroll to Top