ಮಂಗಳೂರು: ಎಂಟನೇ ಮಹಡಿಯಿಂದ ಕೆಳಗೆ ಬಿದ್ದು ಐದು ವರ್ಷದ ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.31. ಐದು ವರ್ಷದ ಮಗುವೊಂದು ಎಂಟನೇ ಮಹಡಿಯಿಂದ ಕೆಳಕ್ಕೆ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ಗುರುವಾರದಂದು ನಡೆದಿದೆ.

ಮೃತ ಮಗುವನ್ನು ಇಲ್ಲಿನ ಶಾಂತಿನಗರ ನಿವಾಸಿ
ವಿಲ್ಸನ್ – ಆಲಿತಾ ದಂಪತಿಯ ಪುತ್ರಿ ಶಾನೆಲ್ ಜೆನಿಶೀಯಾ ಡಿಸೋಜಾ (5) ಎಂದು ಗುರುತಿಸಲಾಗಿದೆ. ಗುರುವಾರ ಬೆಳಿಗ್ಗೆ ಎಂಟನೇ ಮಹಡಿಯಲ್ಲಿನ ತನ್ನ ನಿವಾಸದ ಸ್ಲೈಡರ್ ಕಿಟಕಿ ಮೂಲಕ ಕೆಳಗೆ ಇಣುಕಿದ ಮಗು ಆಯತಪ್ಪಿ ಬಿದ್ದ ಪರಿಣಾಮ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

Scroll to Top