ದಾಂಡೇಲಿ ರೆಸಾರ್ಟ್ ಜಿಪ್‌ಲೈನ್ ದುರಂತ: ಪ್ರವಾಸಿಗ ಕುಬೇರ ಸ್ಥಿತಿ ಗಂಭೀರ; ನೆಟ್ಟಿಗರ ಆಕ್ರೋಶ



(ನ್ಯೂಸ್‌ ಕಡಬ) newskadaba.com,  ಜು.20 : ದಾಂಡೇಲಿಯ ಖಾಸಗಿ ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಸವಾರಿಯ ಮಧ್ಯೆ ಸುರಕ್ಷತಾ ಲಾಕ್ ವೈಫಲ್ಯಗೊಂಡ ಪರಿಣಾಮ ಪ್ರವಾಸಿಗ ಕುಬೇರ ಅವರು ಸುಮಾರು 40 ಅಡಿ ಎತ್ತರದಿಂದ ನೇರವಾಗಿ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.







ಅಪಘಾತದಲ್ಲಿ ಕುಬೇರ ಅವರ ಕೈ-ಕಾಲುಗಳು ಮುರಿತಕ್ಕೊಳಗಾಗಿದ್ದು, ನರಗಳಿಗೂ ಗಂಭೀರ ಹಾನಿಯಾಗಿದೆ. ಸದ್ಯ ಅವರಿಗೆ ಮಹಾರಾಷ್ಟ್ರದ ಮಿರಜ್‌ನ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ.ರೆಸಾರ್ಟ್‌ನ ಜಿಪ್‌ಲೈನ್ ಉಪಕರಣಗಳು ತುಕ್ಕು ಹಿಡಿದಿದ್ದವು ಮತ್ತು ಸಮರ್ಪಕ ನಿರ್ವಹಣೆ ಇರಲಿಲ್ಲ ಎಂದು ಗಾಯಾಳುವಿನ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.






ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಹಸ ಪ್ರವಾಸೋದ್ಯಮ ಕೇಂದ್ರಗಳಲ್ಲಿ ಅಂತರರಾಷ್ಟ್ರೀಯ ಮಟ್ಟದ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

error: Content is protected !!
Scroll to Top