(ನ್ಯೂಸ್ ಕಡಬ) newskadaba.com ಕಡಬ, ಜು. 15. ಜೆಸಿಐ ಕಡಬ ಕದಂಬ ವತಿಯಿಂದ ಆಯೋಜಿಸಲಾದ ‘ನಮ್ಮ ಕದಂಬ–ನಮ್ಮ ಕುಟುಂಬ’ ಕಾರ್ಯಕ್ರಮ, ವಲಯ ಉಪಾಧ್ಯಕ್ಷರ (ZVP) ದ್ವಿತೀಯ ಅಧಿಕೃತ ಭೇಟಿ ಹಾಗೂ ಆದಾಯ ತೆರಿಗೆ (ITR) ಜಾಗೃತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ 60ಕ್ಕೂ ಅಧಿಕ ಸದಸ್ಯರು ಕುಟುಂಬ ಸಮೇತರಾಗಿ ಭಾಗವಹಿಸಿ, ಪರಸ್ಪರ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು. ವಲಯ ಉಪಾಧ್ಯಕ್ಷರು ತಮ್ಮ ಅಧಿಕೃತ ಭೇಟಿಯ ಸಂದರ್ಭದಲ್ಲಿ ಜೆಸಿಐನ ಮುಂದಿನ ಕಾರ್ಯಯೋಜನೆಗಳ ಕುರಿತು ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ಆದಾಯ ತೆರಿಗೆ ಕುರಿತ ಕಾರ್ಯಾಗಾರದಲ್ಲಿ ಜೆಸಿ ಎಲಿಜಬೆತ್ ಅವರು ಆದಾಯ ತೆರಿಗೆ ಸಲ್ಲಿಕೆಯ ಮಹತ್ವ ಹಾಗೂ ಅಗತ್ಯ ಮಾಹಿತಿಯನ್ನು ವಿವರಿಸಿದರು.
ಕಾರ್ಯಕ್ರಮಕ್ಕೆ ಸ್ಥಳಾವಕಾಶ ಕಲ್ಪಿಸಿ ಆತ್ಮೀಯ ಆತಿಥ್ಯ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಿದ ಜೆಸಿ ಕೃಷ್ಣ ಕಾರಂತ ಅವರನ್ನು ಅಧ್ಯಕ್ಷರು ಹಾಗೂ ಸದಸ್ಯರು ಅಭಿನಂದಿಸಿದರು. ಕಾರ್ಯಕ್ರಮದ ವ್ಯವಸ್ಥೆಗೆ ಸಹಕರಿಸಿದ ಜೆಸಿ ಕಾಶಿನಾಥ್ ಗೋಗಟೆ ಅವರ ಸೇವೆಯನ್ನು ಇದೇ ವೇಳೆ ಸ್ಮರಿಸಿ ಧನ್ಯವಾದ ಸಲ್ಲಿಸಲಾಯಿತು. ಜೆಸಿ ಶಿವಪ್ರಸಾದ್ ಮೈಲೇರಿ ಅವರ ನೇತೃತ್ವದಲ್ಲಿ ನಡೆದ ವಿವಿಧ ಗೇಮ್ಸ್ ಹಾಗೂ ಮನರಂಜನಾ ಚಟುವಟಿಕೆಗಳು ಸದಸ್ಯರು ಮತ್ತು ಕುಟುಂಬಸ್ಥರ ಮೆಚ್ಚುಗೆಗೆ ಪಾತ್ರವಾದವು.
ಈ ಸಂದರ್ಭದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಆಗಸ್ಟ್ 15 ಹಾಗೂ 16ರಂದು ಸದಸ್ಯರ ಪ್ರವಾಸ ಆಯೋಜನೆ, ಜೆಸಿ ಅಶೋಕ್ ಅವರನ್ನು ಪ್ರಾಜೆಕ್ಟ್ ಡೈರೆಕ್ಟರ್ ಆಗಿ ನೇಮಕ ಹಾಗೂ ಕಡಬದಲ್ಲಿ ಬೃಹತ್ ಆರೋಗ್ಯ ಮೇಳ ಆಯೋಜಿಸುವ ಕುರಿತು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಸದಸ್ಯರು, ಪೂರ್ವಾಧ್ಯಕ್ಷರು ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ಜೆಸಿಐ ಕಡಬ ಕದಂಬ ಅಧ್ಯಕ್ಷ ಜೇಮ್ಸ್ ಕ್ರಿಶಲ್ ಡಿಸೋಜಾ ಕೃತಜ್ಞತೆ ಸಲ್ಲಿಸಿ, ಮುಂದಿನ ಕಾರ್ಯಕ್ರಮಗಳಿಗೂ ಇದೇ ರೀತಿಯ ಸಹಕಾರ ಹಾಗೂ ಭಾಗವಹಿಸುವಿಕೆಯನ್ನು ನೀಡುವಂತೆ ಮನವಿ ಮಾಡಿದರು.









