(ನ್ಯೂಸ್ ಕಡಬ) newskadaba.com ಕಡಬ, ಮೇ.29. ಕಡಬ ಭಾಗದಲ್ಲಿ ಭಾನುವಾರ ರಾತ್ರಿ ಗಾಳಿ ಸಹಿತ ಮಳೆಗೆ ಕಡಬ – ಕೊಣಾಜೆ ರಸ್ತೆಯ ಕೊಣಾಜೆ ಎಂಬಲ್ಲಿ ವಿದ್ಯುತ್ ಪರಿವರ್ತಕ ಹೊತ್ತ ಎರಡು ವಿದ್ಯುತ್ ಕಂಬಗಳು ಪರಿವರ್ತಕ ಸಹಿತ ಧರೆಗುರುಳಿ ಮೆಸ್ಕಾಂಗೆ ಅಪಾರ ನಷ್ಟವುಂಟಾಗಿದೆ.
ವಿದ್ಯುತ್ ಕಂಬ ಹಲವು ದಿನಗಳಿಂದ ವಾಲಿ ನಿಂತು ಅಪಾಯವನ್ನು ಸೂಚಿಸುತ್ತಿರುವ ಬಗ್ಗೆ ಸ್ಥಳೀಯರು ಮೆಸ್ಕಾಂನ ಗಮನ ಸೆಳೆದಿದ್ದರು. ಆದರೂ ಇಲಾಖೆಯಿಂದ ಯಾವುದೇ ಸ್ಪಂದನೆ ವ್ಯಕ್ತವಾಗಿರಲಿಲ್ಲ ಎನ್ನಲಾಗಿದೆ. ಭಾನುವಾರದಂದು ಪರಿವರ್ತಕ ಧರೆಗುರುಳಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.