ಎಡಮಂಗಲ: ಹೃದಯ ಸಂಬಂಧಿ ಕಾಯಿಲೆಗೆ ಬಲಿಯಾದ 15 ವರ್ಷದ ಶಾಲಾ ಬಾಲಕ

(ನ್ಯೂಸ್‌ ಕಡಬ) newskadaba.com,ಜು.06 ಎಡಮಂಗಲ: ಹೃದಯ ಸಂಬಂಧಿ ಕಾಯಿಲೆಯಿಂದ 9ನೇ ತರಗತಿ ವಿದ್ಯಾರ್ಥಿ ಶಿಶಿಲ್ (15) ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ.

ಶಿಶಿಲ್ ಅವರು ಎಡಮಂಗಲ ಗ್ರಾಮದ ಕರಿಂಬಿಲ ನಿವಾಸಿ ಪೂರ್ಣಚಂದ್ರ ಗೌಡ ಹಾಗೂ ಕವಿತಾ ದಂಪತಿಯ ಪುತ್ರ ಹಾಗೂ ನಿಂತಿಕಲ್ಲು ಶಾಲೆಯ ವಿದ್ಯಾರ್ಥಿಯಾಗಿದ್ದರು. ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರಿಗೆ ಕಾಣಿಯೂರು, ಪುತ್ತೂರು, ಮಂಗಳೂರು ಕೆಎಂಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲು ನಿರ್ಧರಿಸಿದ್ದ ವೇಳೆ, ಜುಲೈ 5ರ ರಾತ್ರಿ ಆರೋಗ್ಯ ಗಂಭೀರಗೊಂಡಿದ್ದು, ಪುತ್ತೂರಿಗೆ ಚಿಕಿತ್ಸೆಗೆ ಕರೆದೊಯ್ಯುವ ಮಾರ್ಗಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಶಿಶಿಲ್ ಯಕ್ಷಗಾನ ಹಾಗೂ ನಾಟಕ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದರು. ಅವರು ತಂದೆ-ತಾಯಿ, ಸಹೋದರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Scroll to Top