(ನ್ಯೂಸ್ ಕಡಬ) newskadaba.com ಜು. 03. ಕೃಷಿ ಇಲಾಖೆಯ ವಶದಲ್ಲಿರುವ ʻʻಸಮೃದ್ದಿ ಸಂಪೂರ್ಣ ಸಾವಯವ ಗೊಬ್ಬರ” ಎಂಬ ಹೆಸರಿನ ಸಾವಯವ ಗೊಬ್ಬರದ ಹರಾಜು ಪ್ರಕ್ರಿಯೆಯನ್ನು ಜುಲೈ 7ರಂದು ಬೆಳಿಗ್ಗೆ 11.30 ಗಂಟೆಗೆ ಸುಳ್ಯ ಪ್ರೈಮರಿ ಅಗ್ರಿಕಲ್ಚರಲ್ ಕ್ರೆಡಿಟ್ ಕೊ- ಆಪರೇಟಿವ್ ಸೊಸೈಟಿಯಲ್ಲಿ ನಡೆಸಲಾಗುತ್ತದೆ.
ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ಅಧಿಕೃತವಾಗಿ ರಸಗೊಬ್ಬರ ಪರವಾನಿಗೆ ಹೊಂದಿರುವ ಮಾರಾಟಗಾರರು ಹಾಜರಾಗಬೇಕು. ರಸಗೊಬ್ಬರಗಳನ್ನು ಇರುವ ಸ್ಥಿತಿಯಲ್ಲಿಯೇ ಹರಾಜು ಮಾಡಲಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುಳ್ಯ: ಜುಲೈ 7ರಂದು ಸಾವಯವ ಗೊಬ್ಬರ ಹರಾಜು ಪ್ರಕ್ರಿಯೆ









