ಬೋಳೂರು ಚಿತಾಗಾರ ದುರಸ್ಥಿ

(ನ್ಯೂಸ್ ಕಡಬ) newskadaba.com ಜೂ. 30. ಬೋಳೂರು ವಿದ್ಯುತ್ ಚಿತಾಗಾರವು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೆ ಬಳಕೆಯಲ್ಲಿರುವ ಪ್ರಮುಖ ವಿದ್ಯುತ್ ಚಿತಾಗಾರವಾಗಿದೆ. ವಿದ್ಯುತ್ ಚಿತಾಗಾರದ ಚಿಮಣಿಯು ಇತ್ತೀಚಿಗೆ ಬಿದ್ದ ಮಳೆ ಮತ್ತು ಗಾಳಿಗೆ ಮುರಿದು ಬಿದ್ದಿರುವುದರಿಂದ ಚಿತಾಗಾರವನ್ನು ಶವ ಸಂಸ್ಕಾರಕ್ಕೆ ಸ್ಥಗಿತಗೊಳಿಸಲಾಗಿದ್ದು, ಹೊಸದಾಗಿ ಅಳವಡಿಸಿ ಕಾರ್ಯಚರಣೆಗೆ ಸಿದ್ಧವಾಗುವವರೆಗೆ ಸುರತ್ಕಲ್ ವಿದ್ಯುತ್ ಚಿತಾಗಾರದಲ್ಲಿ ಶವ ಸಂಸ್ಕಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9880250617, 9743145481 ಸಂಪರ್ಕಿಸಬಹುದು ಎಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Scroll to Top