ರಾಯಲ್ ಎನ್‌ಫೀಲ್ಡ್‌ನ ಮೊದಲ ಎಲೆಕ್ಟ್ರಿಕ್ ಬೈಕ್ ‘ಫ್ಲೈಯಿಂಗ್ ಫ್ಲಿಯಾ C6’ ಭಾರತದಲ್ಲಿ ಬಿಡುಗಡೆ!



(ನ್ಯೂಸ್‌ ಕಡಬ) newskadaba.com,ಜೂ.20: ನವದೆಹಲಿ: ಕ್ಲಾಸಿಕ್ ಬೈಕ್‌ಗಳ ಖ್ಯಾತಿಯ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಹೊಸ ಉಪ-ಬ್ರಾಂಡ್ ‘ಫ್ಲೈಯಿಂಗ್ ಫ್ಲಿಯಾ’ ಅಡಿಯಲ್ಲಿ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಫ್ಲೈಯಿಂಗ್ ಫ್ಲಿಯಾ C6’ ಅನ್ನು ಅಧಿಕೃತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಮೊದಲ ಬ್ಯಾಚ್ ವಿತರಣೆಯನ್ನು ಆರಂಭಿಸಿದೆ.ಮೈಲೇಜ್ & ಬ್ಯಾಟರಿ: 3.91 kWh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 154 ಕಿಲೋಮೀಟರ್ ಚಲಿಸಬಲ್ಲದು.







ಕೇವಲ 65 ನಿಮಿಷಗಳಲ್ಲಿ ಶೇ. 20 ರಿಂದ 80 ರಷ್ಟು ಚಾರ್ಜ್ ಆಗಲಿದ್ದು, ಪೂರ್ಣ ಚಾರ್ಜ್‌ಗೆ 2 ಗಂಟೆ 16 ನಿಮಿಷಗಳು ಬೇಕಾಗುತ್ತದೆ.ಇದರಲ್ಲಿರುವ PMSM ಎಲೆಕ್ಟ್ರಿಕ್ ಮೋಟಾರ್ 15.4 kW ಪವರ್ ಹಾಗೂ 60 Nm ಟಾರ್ಕ್ ಉತ್ಪಾದಿಸುತ್ತದೆ.ರೆಟ್ರೋ ಲುಕ್ ಜೊತೆಗೆ TFT ಟಚ್‌ಸ್ಕ್ರೀನ್ ಡಿಸ್ಪ್ಲೇ, 19 ಇಂಚಿನ ಅಲಾಯ್ ಚಕ್ರಗಳು, ಕೀಲೆಸ್ ಸ್ಟಾರ್ಟ್ ಮತ್ತು ಮೊಬೈಲ್ ಆ್ಯಪ್ ಕನೆಕ್ಟಿವಿಟಿ ಸೌಲಭ್ಯ ಹೊಂದಿದೆ.






ಎರಡನೇ ಮಹಾಯುದ್ಧದ ಸಮಯದಲ್ಲಿ ಸೇನೆಗಾಗಿ ಬಳಸಲಾಗಿದ್ದ ರಾಯಲ್ ಎನ್‌ಫೀಲ್ಡ್‌ನ ಪ್ರಸಿದ್ಧ 125ಸಿಸಿ ಹಗುರ ತೂಕದ ‘ಫ್ಲೈಯಿಂಗ್ ಫ್ಲಿಯಾ’ ಬೈಕ್‌ನ ನೆನಪಿನಲ್ಲಿ ಈ ಇವಿ ಸರಣಿಗೆ ಇದೇ ಹೆಸರನ್ನು ಇಡಲಾಗಿದೆ. ಭಾರತದಲ್ಲಿ ಇದರ ಆರಂಭಿಕ ಎಕ್ಸ್-ಶೋರೂಂ ಬೆಲೆಯನ್ನು ಅಂದಾಜು ರೂ. 2.79 ಲಕ್ಷ ಎಂದು ನಿಗದಿಪಡಿಸಲಾಗಿದ್ದು, ಪ್ರೀಮಿಯಂ ಇವಿ ವಲಯದಲ್ಲಿ ಈ ಬೈಕ್ ಹೊಸ ಸಂಚಲನ ಮೂಡಿಸುವ ನಿರೀಕ್ಷೆಯಿದೆ.

error: Content is protected !!
Scroll to Top