ರೈಲ್ವೆ ನಿಯಮ ಪರಿಷ್ಕರಣೆ: ಜುಲೈ 1 ರಿಂದ ಟಿಕೆಟ್‌ರಹಿತ ಪ್ರಯಾಣಕ್ಕೆ ಬೀಳಲಿದೆ ದುಪ್ಪಟ್ಟು ದಂಡ!



(ನ್ಯೂಸ್‌ ಕಡಬ) newskadaba.com,ಜೂ.20 ನವದೆಹಲಿ: ರೈಲು ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಮತ್ತು ರೈಲ್ವೆ ಆವರಣದಲ್ಲಿ ಶಿಸ್ತು ಕಾಪಾಡಲು ಭಾರತೀಯ ರೈಲ್ವೆ ಇಲಾಖೆಯು ವಿವಿಧ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ.







ಮಹಿಳೆಯರಿಗಾಗಿ ಮೀಸಲಾದ ಬೋಗಿಗಳಿಗೆ ಪುರುಷ ಪ್ರಯಾಣಿಕರು ಅನಧಿಕೃತವಾಗಿ ಪ್ರವೇಶಿಸಿದರೆ ಗರಿಷ್ಠ ₹2,500 ವರೆಗೆ ದಂಡ ವಿಧಿಸಲಾಗುತ್ತದೆ.ರೈಲ್ವೆ ಆವರಣ ಅಥವಾ ರೈಲುಗಳಲ್ಲಿ ಪರವಾನಗಿ ಇಲ್ಲದೆ ವ್ಯಾಪಾರ ಮಾಡುವುದು ಅಥವಾ ಭಿಕ್ಷೆ ಬೇಡುವುದು ಕಂಡುಬಂದಲ್ಲಿ ₹2,000 ದಂಡ ಪಾವತಿಸಬೇಕಾಗುತ್ತದೆ.






ರೈಲಿನಲ್ಲಿ ಅಪಾಯಕಾರಿ ಅಥವಾ ನಿಷೇಧಿತ ವಸ್ತುಗಳನ್ನು ಸಾಗಿಸುವವರಿಗೆ ಗರಿಷ್ಠ ₹10,000 ವರೆಗೆ ಭಾರಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.ಸೂಕ್ತ ಟಿಕೆಟ್ ಅಥವಾ ಅನುಮತಿ ಇಲ್ಲದೆ ರೈಲು ಅಥವಾ ರೈಲ್ವೆ ನಿಲ್ದಾಣದ ಆವರಣಕ್ಕೆ ಅನಧಿಕೃತವಾಗಿ ಪ್ರವೇಶಿಸಿದರೆ ₹500 ದಂಡ ಬೀಳಲಿದೆ.

error: Content is protected !!
Scroll to Top