ಸುಳ್ಯದಲ್ಲಿ ಮನೆಯ ಮುಂಭಾಗದಲ್ಲೇ ಧರೆಗುರುಳಿದ ತೆಂಗಿನ ಮರ



(ನ್ಯೂಸ್‌ ಕಡಬ) newskadaba.com,  ಜೂ.16 : ಸುಳ್ಯ ತಾಲೂಕಿನ ಪೈಚಾರು ಗ್ರಾಮದಲ್ಲಿ ಸೋಮವಾರ ಮನೆಯ ಮುಂಭಾಗದಲ್ಲಿದ್ದ ತೆಂಗಿನ ಮರವೊಂದು ಇದ್ದಕ್ಕಿದ್ದಂತೆ ಮುರಿದು ಅಂಗಳಕ್ಕೆ ಬಿದ್ದಿದೆ.







ಶಾಫಿ ಪ್ರಗತಿ ಎಂಬುವವರ ಮನೆಯ ಅಂಗಳದಲ್ಲಿ ಈ ಅವಘಡ ಸಂಭವಿಸಿದೆ. ಶಾಫಿ ಅವರ ಹಿರಿಯ ಸಹೋದರ ಹಸೈನಾರ್ ಅವರು ಮಳೆನೀರನ್ನು ಬಕೆಟ್‌ನಲ್ಲಿ ಸಂಗ್ರಹಿಸುತ್ತಿದ್ದಾಗ ಮರ ಬೀಳುವುದನ್ನು ಗಮನಿಸಿ ತಕ್ಷಣವೇ ಪಕ್ಕಕ್ಕೆ ಸರಿದು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.






ಮರ ಬೀಳುವ ಕೆಲವೇ ಕ್ಷಣಗಳ ಮುನ್ನ ಶಾಫಿ ಅವರ ತಾಯಿ ಕೂಡ ಇದೇ ಸ್ಥಳದಲ್ಲಿ ನಿಂತಿದ್ದರು ಎನ್ನಲಾಗಿದೆ.ತೆಂಗಿನ ಮರ ಮುರಿದು ಬೀಳುವ ಈ ಆತಂಕಕಾರಿ ದೃಶ್ಯವು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 

error: Content is protected !!
Scroll to Top