(ನ್ಯೂಸ್ ಕಡಬ) newskadaba.com, ಜೂ.08 ಬೆಂಗಳೂರು: ಮಂಗಳೂರಿನ ಬೆಂಗ್ರೆ, ಸುಲ್ತಾನ್ ಬತ್ತೇರಿ ಹಾಗೂ ಬೊಕ್ಕಪಟ್ಣ ಭಾಗದ ಫಲ್ಗುಣಿ ನದಿಯಲ್ಲಿ ಶನಿವಾರ ನೂರಾರು ಮೀನುಗಳು ಸತ್ತು ತೇಲಿವೆ…
.ಸೇತುವೆ ಕಾಮಗಾರಿಗಾಗಿ ಹಾಕಲಾಗಿದ್ದ ತಡೆಗೋಡೆಯಿಂದಾಗಿ ಕಳೆದ 5 ತಿಂಗಳುಗಳಿಂದ ನದಿಯಲ್ಲಿ ಕೈಗಾರಿಕಾ ರಾಸಾಯನಿಕ ತ್ಯಾಜ್ಯ ಹಾಗೂ ಒಳಚರಂಡಿ ನೀರು ಒಂದೇ ಕಡೆ ಸಂಗ್ರಹವಾಗಿತ್ತು.
ಮಳೆಯಿಂದಾಗಿ ನದಿಯಲ್ಲಿ ಹೊಸ ನೀರು ಬಂದಾಗ ಮೇಲ್ಮುಖವಾಗಿ ಈಜಿದ ಮೀನುಗಳು, ನೀರಿನಲ್ಲಿದ್ದ ತೀವ್ರ ರಾಸಾಯನಿಕ ಮಾಲಿನ್ಯದಿಂದಾಗಿ ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿವೆ.
ಸಂಸ್ಕರಿಸದ ಒಳಚರಂಡಿ ತ್ಯಾಜ್ಯವನ್ನು ನದಿಗೆ ಬಿಡಲು ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಈಗಾಗಲೇ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.









