(ನ್ಯೂಸ್ ಕಡಬ) newskadaba.com, ಜೂ.05: ಸೇನಾಧಿಕಾರಿಗಳ ತರಬೇತಿ ವೇಳೆ ನೌಕಾಪಡೆಯ ಏಕೈಕ ಮಹಿಳಾ ಕಮಾಂಡೋ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಘಟನೆ ಯುಕೆಯಲ್ಲಿ ನಡೆದಿದೆ. ಬ್ರಿಟನ್ ನೇವಿಯ ಏಕೈಕ ಮಹಿಳಾ ಕಮಾಂಡೋ 31ರ ಹರೆಯದ ಲಿಲಿ ಮೇ ಫಿಶರ್ ದುರಂತ ಅಂತ್ಯ ಕಂಡಿದ್ದಾರೆ.
ಇಂಗ್ಲೆಂಡ್‌ನ ಸೌತ್‌ವೆಸ್ಟ್ ಭಾಗದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಪತನಕ್ಕೆ ಕಾರಣ ಸ್ಪಷ್ಟವಾಗಿಲ್ಲ. 2022ರಲ್ಲಿ ತರಬೇತಿ ಪೂರ್ಣಗೊಳಿಸಿ ಬ್ರಿಟನ್ ನೇವಿ ಸೇರಿಕೊಂಡಿದ್ದ ಏಕೈಕ ಮಹಿಳಾ ಕಮಾಂಡೋ ಇದೀಗ ಹೆಲಿಕಾಪ್ಚರ್ ಪತನದಲ್ಲಿ ಅಂತ್ಯಕಂಡಿದ್ದಾರೆ. ಬ್ರಿಟನ್ ನೌಕಾಪಡೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ..
ಬ್ರಿಟನ್ ನೇವಿಯಲ್ಲಿನ ಅಲ್ ಆರ್ಮ್ಸ್ ಕಮಾಂಡೋ ಎಂಬ ಹೆಗ್ಗಳಿಗೆಗೆ ಫಿಶರ್ ಪಾತ್ರರಾಗಿದ್ದರು. ಕಾರಣ 2001ರಿಂದ ಈ ಆಲ್ ಆರ್ಮ್ಸ್ ಕಮಾಂಡೋ ತರಬೇತಿ ಪೂರ್ಣಗೊಳಿಸಿದ ಏಕೈಕ ಕಮಾಂಡೋ ಈ ಫಿಶರ್. ಫಿಶರ್ ಬರೋಬ್ಬರಿ 17 ಬಾರಿ ಪಯತ್ನಿಸಿ ಪಾಸ್ ಆಗಿದ್ದರು.
ಆಲ್ ಆರ್ಮ್ಸ್ ಕಮಾಂಡೋ ತರಬೇತಿಯ ಕೊನೆಯ ತರಬೇತಿ ವೇಳೆ ದುರಂತ ಸಂಭವಿಸಿದೆ. ತರಬೇತಿಯ ಅಂತಿಮ ಹಂತದಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ. ಈ ಘಟನೆಯಲ್ಲಿ ನೌಕಾಪಡೆಯ ಮತ್ತಿಬ್ಬರು ಕಿರಿಯ ಅಧಿಕಾರಿಗಳು ದುರಂತ ಅಂತ್ಯಕಂಡಿದ್ದಾರೆ.
ನೌಕಾಪಡೆಯ ಕಮಾಂಡೋ ಆಗಿದ್ದ ಫಿಶರ್ ಇನ್‌ಸ್ಟಾಗ್ರಾಂನಲ್ಲಿ 45 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದರು. ತಮ್ಮ ನೌಕಾಪಡೆಯ ಸೇವೆ, ತರಬೇತಿ ಕುರಿತು ಪೋಸ್ಟ್ ಮಾಡಿ ಜನರ ನೆಚ್ಚಿನ ಕಮಾಂಡೋ ಆಗಿ ಹೊರಹೊಮ್ಮಿದ್ದರು. ಸೋಶಿಯಲ್ ಮೀಡಿಯಾ ಮೂಲಕ ಜನರ ಜೊತೆ ಉತ್ತಮ ಸಂಪರ್ಕದಲ್ಲಿದ್ದರು.
ಬ್ರಿಟನ್ ನೌಕಾಪಡೆಯ ಏಕೈಕ ನೇವಿ ಕಮಾಂಡೋ ದುರಂತ ಅಂತ್ಯಕಂಡ ಹೆಲಿಕಾಪ್ಟರ್ ಪತನ ಕುರಿತು ಬ್ರಿಟನ್ ಸರ್ಕಾರ ತನಿಖೆಗೆ ಆದೇಶಿಸಿದೆ. ಅಂತಿಮ ಹಂತದಲ್ಲಿ ತಾಂತ್ರಿಕ ದೋಷವೋ ಅಥವಾ ಉದ್ದೇಶಪೂರ್ವಕ ಕೃತ್ಯವೋ ಎಂಬ ಅನುಮಾನಗಳನ್ನು ಕೆಲ ಎಜೆನ್ಸಿಗಳು ವ್ಯಕ್ತಪಡಿಸಿದೆ.













