(ನ್ಯೂಸ್ ಕಡಬ) newskadaba.com, ಜೂ.03 ಮುಂದಿನ ಆರು ತಿಂಗಳಲ್ಲಿ ಕರ್ನಾಟಕ ವಿಧಾನ ಸಭೆ ಮತ್ತು ವಿಧಾನ ಪರಿಷತ್ ಸೇರಿದಂತೆ ಎರಡೂ ಸದನಗಳಲ್ಲಿ ಡಿಜಿಟಲೀಕರಣ ವ್ಯವಸ್ಥೆ ಜಾರಿಯಾಗಲಿದೆ ಎಂದು ಕರ್ನಾಟಕ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಜ್ಯದ ಎರಡು ಸದನಗಳ ಡಿಜಿಟಲೀ ಕರಣಕ್ಕೆ ಸರಕಾರದ ಅನುಮೋದನೆ ದೊರೆತಿದೆ.ಕೇಂದ್ರ ಮತ್ತು ರಾಜ್ಯ ಸರಕಾರದ ತಲಾ ಶೇ. ೫೦ರ ಅನುದಾನದೊಂದಿಗೆ ಈ ಡಿಜಿಟಲೀಕರಣ ನಡೆಸಲು ಸಮ್ಮತಿ ಸಿದೆ. ಬೆಂಗಳೂರು, ಬೆಳಗಾವಿ ಸೇರಿ ೭೮ ಕೋಟಿ ಹಾಗೂ ವಿಧಾನ ಪರಿಷತ್ ಗೆ ೫೨ ಕೋಟಿ ಯ ಡಿಪಿಆರ್ ಮಾಡ ಲಾಗಿದೆ.ಇದರಿಂದ ಕಾಗದ ರಹಿತ ಆಡಳಿತ ವ್ಯವಹಾರ ನಡೆಸುವ ಕಾರಣ ಉಳಿತಾಯ ವಾಗಲಿದೆ.ಸದನದ ಸದಸ್ಯರಿಗೂ ಮಾಹಿತಿ ಪಡೆಯಲು ಅನುಕೂಲ ವಾಗಲಿದೆ. ಹಾಜರಾತಿ ವ್ಯವಸ್ಥೆ ಬದಲಾಗಲಿದೆ ಎಂದರು.
’ಮಂಗಳೂರಿನಲ್ಲಿ ಸೈಬರ್ ಸೇಪ್ಪಿ ವ್ಯವಸ್ಥೆ:-
ಮಂಗಳೂರು ಸ್ಮಾರ್ಟ್ ಸಿಟಿ ಹೊರತಾದ ಪ್ರದೇಶಗಳಲ್ಲಿ ಸುಮಾರು ೨೦ ಕೋಟಿ ರೂಪಾಯಿ ವೆಚ್ಚದಲ್ಲಿ ಎಐ ಆಧಾರಿತ ಸೈಬರ್ ಸೇಷ್ಟಿ ವ್ಯವಸ್ಥೆ ಜಾರಿಯಾಗಲಿದೆ.ಈ ವ್ಯವಸ್ಥೆಯ ಮೂಲಕ ಸ್ಮಾರ್ಟ್ ಕೆಮಾರಗಳು ನಗರ ಪ್ರದೇಶದಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಿ.ಸಿ ಕ್ಯಾಮರಗಳ ಅಳವಡಿಕೆ ಮೂಲಕ ಸುರಕ್ಷತಾ ಜಾಲ ನಿರ್ಮಿಸಲಾ ಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಈ ವ್ಯವಸ್ಥೆಯ ನಿರ್ವಹಣೆಗೆ ಸ್ಥಳೀಯ ಖಾಸಗಿ ಸಂಸ್ಥೆಗಳ ಮಾನವ ಸಂಪನ್ಮೂಲ ಸಹಕಾರ ಪಡೆದು ಕೊಳ್ಳಲಾಗುವುದು ಎಂದು ಖಾದರ್ ತಿಳಿಸಿದ್ದಾರೆ.
ಯಾವ ಜವಾಬ್ದಾರಿ ಕೊಟ್ಟರೂ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ
ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನಾನು ಸದ್ಯ ವಿಧಾನಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಯಾವುದೇ ಬದಲಾವಣೆ ಆಗಿಲ್ಲ ಎಂದು ಕರ್ನಾಟಕ ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಕರ್ನಾಟಕದ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಪೀಕರ್ ಆಗಿ ಕಾರ್ಯನಿರ್ವಹಿಸಿರುವ ಬಗ್ಗೆ ನನಗೆ ತೃಪ್ತಿ ಇದೆ. ಮುಂದೆ ಯಾವುದೇ ಹುದ್ದೆ ನೀಡಿದರೂ ಆ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮತ್ತು ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ಹೇಳಿದರು.









