ಸುಳ್ಯ : ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಸಚಿವ ಈಶ್ವರ ಖಂಡ್ರೆ ಭೇಟಿ



(ನ್ಯೂಸ್‌ ಕಡಬ) newskadaba.com,  ಮೇ.28: ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಆಗಮಿಸಿದ ಅರಣ್ಯ ಮತ್ತು ಪರಿಸರಜೀವಶಾಸ್ತ್ರ ಸಚಿವ ಈಶ್ವರ ಖಂಡ್ರೆ ಅವರನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಸ್ವಾಗತಿಸಿದರು.







ಈ ಸಂದರ್ಭದಲ್ಲಿ ಸಚಿವರಿಗೆ ಶಾಸಕಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು. ಈಗಾಗಲೇ ಸಲ್ಲಿಸಲಾಗಿರುವ ಕಡಮಕಲ್ಲು-ಗಾಳಿಬೀಡು-ಮಡಿಕೇರಿ ರಸ್ತೆ ಮತ್ತು ತೋಡಿಕಾನ- ಪಟ್ಟಿ- ಭಾಗಮಂಡಲ ರಸ್ತೆ ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಬೇಕಾದ ಸಹಕಾರ ನೀಡಬೇಕು. ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆಯ ವರದಿಗಳನ್ನು ಶೀಘ್ರವಾಗಿ ಪ್ರಕಟಿಸಬೇಕು. ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರನ್ನು ಒಕ್ಕಲೆಬ್ಬಿಸದೆ ಸದರಿ ಜಾಗದಲ್ಲಿ ವಾಸಿಸುವುದಕ್ಕೆ ಅವಕಾಶ ಮಾಡಿಕೊಟ್ಟು ಹಕ್ಕುಪತ್ರವನ್ನು ಒದಗಿಸಬೇಕು. ಕೃಷಿಕರ ತೋಟಗಳಿಗೆ ಇಲಾಖೆಯ ಅನುದಾನ ಸೋಲಾರ್ ಬೇಲಿ ನಿರ್ಮಾಣಕ್ಕೆ ಪ್ರಸ್ತುತ ಒದಗಿಸುವ ಶೇಕಡ 50/50 ಅನುದಾನದ ಬದಲಿಗೆ 75/25 ಅನುದಾನ ಒದಗಿಸಬೇಕು. ಕೃಷಿ ತೋಟಗಳಿ ಹಾನಿಯಾದ ಪರಿಹಾರ ಮೊತ್ತವನ್ನು ಹೆಚ್ಚಿಸಿ ಅದಷ್ಟು ಬೇಗ ಬಿಡುಗಡೆಗೊಳಿಸಿ ಸಂಕಷ್ಟದಲ್ಲಿರುವ ರೈತರಿಗೆ ನೇರವಾಗುವಂತೆ ಮನವಿ ಸಲ್ಲಿಸಿದರು.






ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ, ಕೇಂದ್ರಿಯ ರಬ್ಬರ್ ಮಂಡಳಿಯ ನಿರ್ದೇಶಕರಾದ ಕೇಶವ ಭಟ್ ಮುಳಿಯ, ಭಾಜಪ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಕೃಷ್ಣಯ್ಯ ಮೂಲೆ ತೋಟ, ಗುತ್ತಿಗಾರು ಪಂಚಾಯತ್ ಮಾಜಿ ಸದಸ್ಯ ರಾಕೇಶ ಮೆಟ್ಟಿನಡ್ಕ, ದೇವಾಲಯದ ಉಪಸ್ಥಿತರಿದ್ದರು.

error: Content is protected !!
Scroll to Top