(ನ್ಯೂಸ್ ಕಡಬ) newskadaba.com, ಮೇ.25: ಕರಾವಳಿ ಚಿತ್ರರಂಗದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರತಿಷ್ಠಿತ ‘ಸ್ಯಾಂಡಿಸ್ ಕಂಪನಿ’ ಪ್ರಸ್ತುತಪಡಿಸಿದ 5ನೇ ವರ್ಷದ ‘ಕರಾವಳಿ ಫಿಲ್ಮ್ ಅವಾರ್ಡ್ಸ್ (CFA) 2026’ ಪ್ರಶಸ್ತಿ ಪ್ರದಾನ ಸಮಾರಂಭವು ಮೇ 24 ಭಾನುವಾರದಂದು ಮೂಲ್ಕಿಯ ಕೊಲ್ನಾಡು ಶ್ರೀ ಸುಂದರ್ ರಾಮ್ ಶೆಟ್ಟಿ ಕನ್ವೆನ್ಷನ್ ಸೆಂಟರ್‌ನಲ್ಲಿ ಅತ್ಯಂತ ವೈಭವದಿಂದ ಜರುಗಿತು.
ಸಂಗೀತ ಮತ್ತು ಮನರಂಜನೆಯ ಮಹಾ ಸಂಗಮದೊಂದಿಗೆ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ ಕರಾವಳಿ ಸಿನಿಮಾರಂಗದ ಪ್ರಮುಖ ತಾರೆಯರು, ತಂತ್ರಜ್ಞರು ಹಾಗೂ ಗಣ್ಯರು ಭಾಗವಹಿಸಿದ್ದರು.
ರೂಪಶ್ರೀ ವರ್ಕಾಡಿ ಅವರಿಗೆ ಪ್ರಶಸ್ತಿ ಗೌರವ
ಈ ಬಾರಿಯ ಪ್ರಶಸ್ತಿ ರೇಸ್‌ನಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿಯು ‘ಮಿಡಲ್ ಕ್ಲಾಸ್ ಫ್ಯಾಮಿಲಿ’ ಚಿತ್ರದ ಅದ್ಭುತ ನಟನೆಗಾಗಿ ಪ್ರಖ್ಯಾತ ನಟಿ ರೂಪಶ್ರೀ ವರ್ಕಾಡಿ ಅವರ ಮುಡಿಗೇರಿದೆ.









