ಕಾಸರಗೋಡು: ಪೊಲೀಸ್ ಜೀಪು- ಆಟೋ ರಿಕ್ಷಾ ನಡುವೆ ಅಪಘಾತ- ಚಾಲಕ ಮೃತ್ಯು



(ನ್ಯೂಸ್‌ ಕಡಬ) newskadaba.com,  ಮೇ 01: ಪೊಲೀಸ್ ಜೀಪು ಹಾಗೂ ಆಟೋ ರಿಕ್ಷಾ ನಡುವೆ ಉಂಟಾದ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟ ಘಟನೆ ವೆಳ್ಳರಿಕುಂಡು ಎಂಬಲ್ಲಿ ನಡೆದಿದೆ.







ಆಟೋ ಚಾಲಕ ಪೂಂಗಮ್ ಚಾಲದ ರಾಜು ಮೃತಪಟ್ಟವರು. ಪೊಲೀಸ್ ಜೀಪಿನಲ್ಲಿದ್ದ ಎ ಎಸ್ ಐ ಗಾಯಗೊಂಡಿದ್ದಾರೆ. ಗುರುವಾರ ಸಂಜೆ 7:30 ರ ಸುಮಾರಿಗೆ ತಾಲೂಕು ಕಚೇರಿ ಪ್ರದೇಶದ ಬಳಿಯ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.






ಪೊಲೀಸ್ ಜೀಪ್ ಮತ್ತು ಆಟೋರಿಕ್ಷಾ ಡಿಕ್ಕಿ ಹೊಡೆದಿದ್ದು. ಗಂಭೀರವಾಗಿ ಗಾಯಗೊಂಡ ಆಟೋ ಚಾಲಕನನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು.

error: Content is protected !!
Scroll to Top