(ನ್ಯೂಸ್ ಕಡಬ) newskadaba.com, ಎ.22: ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ‘ರಾಜ ಶಿವಾಜಿ’ ಟ್ರೇಲರ್ ಇತ್ತೀಚೆಗೆ ಬಿಡುಗಡೆ ಆಗಿದೆ.
ಟ್ರೇಲರ್ ರಿಲೀಸ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಏಪ್ರಿಲ್ 20ರಂದು ಅದ್ದೂರಿಯಾಗಿ ಟ್ರೇಲರ್ ಲಾಂಚ್ ಆಗಿದ್ದರೂ, ಛತ್ರಪತಿ ಶಿವಾಜಿ ಮಹಾರಾಜರ ಪಾತ್ರಕ್ಕೆ ರಿತೇಶ್ ಆಯ್ಕೆಯಾಗಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರೇಕ್ಷಕರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾ ವೇದಿಕೆಗಳಲ್ಲಿ ಈ ಪಾತ್ರಕ್ಕೆ ರಿತೇಶ್ ಅವರು ಹೊಂದಿಕೆಯಾಗುತ್ತಿಲ್ಲ. ಅವರ ಧ್ವನಿಯಲ್ಲಿ ಆ ಗಾಂಭೀರ್ಯ ಮತ್ತು ಶಕ್ತಿ ಇಲ್ಲ’ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ರಿತೇಶ್ ದೇಶ್‌ಮುಖ್ ಅವರ ಸಂಭಾಷಣೆ ಮತ್ತು ಹಾವಭಾವಗಳಲ್ಲಿ ಶಿವಾಜಿ ಮಹಾರಾಜರಂತಹ ಮಹಾನ್ ವೀರನ ವ್ಯಕ್ತಿತ್ವ ಕಾಣಿಸುತ್ತಿಲ್ಲ. ಮೇಕಪ್ ಮಾಡಿದರೂ ಅವರು ಆ ಪಾತ್ರಕ್ಕೆ ಜೀವ ತುಂಬಲು ವಿಫಲರಾಗಿದ್ದಾರೆ’ ಎಂಬ ಕಮೆಂಟ್ ಕೂಡ ಬಂದಿದೆ. ಶಿವಾಜಿ ಮಹಾರಾಜರ ಪಾತ್ರಕ್ಕೆ ಶರದ್ ಕೇಳ್ಕರ್ ಅವರಂತಹ ಗಂಭೀರ ಧ್ವನಿಯ ನಟ ಬೇಕಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ದಕ್ಷಿಣ ಭಾರತದ ನಟರಾದ ರಾಮ್ ಚರಣ್ ಅಥವಾ ರಿಷಬ್ ಶೆಟ್ಟಿ ಅವರಂತಹ ನಟರು ಈ ಪಾತ್ರಕ್ಕೆ ಹೆಚ್ಚು ಸೂಕ್ತ ಎಂದು ಹೇಳುತ್ತಿದ್ದಾರೆ.









