ಕಡಬ ಪೊಲೀಸ್ ಠಾಣೆಯಲ್ಲಿ ದೊಡ್ಡ ಸ್ಫೋಟ ► ತಪ್ಪಿದ ಭಾರೀ ಅನಾಹುತ

ಕಡಬ, ಮೇ.16. ಇಲ್ಲಿನ ಪೊಲೀಸ್ ಠಾಣೆಯ ಹಳೆಯ ಕಟ್ಟಡದಲ್ಲಿ ಭಾರೀ ಸದ್ದಿನೊಂದಿಗೆ ಸ್ಫೋಟವೊಂದು ನಡೆದಿದ್ದು, ಕಟ್ಟಡಕ್ಕೆ ಹಾನಿಯಾದ‌ ಘಟನೆ ಬುಧವಾರ ರಾತ್ರಿ ನಡೆದಿದೆ.

ಠಾಣೆಯ ಹಳೆಯ ಕಟ್ಟಡದಲ್ಲಿ ಗೃಹ ರಕ್ಷಕ ದಳದ ಕಛೇರಿಯನ್ನಾಗಿ ಬಳಸಲಾಗುತ್ತಿದ್ದು, ಬುಧವಾರ ರಾತ್ರಿ 7 ಗಂಟೆಯ ಸುಮಾರಿಗೆ ಇದ್ದಕ್ಕಿದ್ದಂತೆ ಭಾರೀ ಸದ್ದಿನೊಂದಿಗೆ ಸ್ಫೋಟವೊಂದು ನಡೆದಿದೆ. ಘಟನೆಗಿಂತ ಕೆಲವೇ ಕ್ಷಣಗಳ ಮುಂಚೆ ಸ್ಥಳದಲ್ಲಿದ್ದ ಇಬ್ಬರು ಅಲ್ಲಿಂದ ತೆರಳಿದ್ದು, ಸಂಭಾವ್ಯ ಪ್ರಾಣಾಪಾಯ ತಪ್ಪಿದೆ. ಈ ಸಂದರ್ಭದಲ್ಲಿ ಕಟ್ಟಡದ ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಕೆಲವು ವಾಹನಗಳಿಗೆ ಹಾನಿಯಾಗಿವೆ. ಅಲ್ಲದೆ ಕಡಬ ಪರಿಸರದ ಕೆಲವು ಮನೆಗಳ ಕಿಟಕಿ ಗಾಜುಗಳು ಒಡೆದಿದ್ದು, ಸ್ಫೋಟದಿಂದ ಉಂಟಾದ ಭಾರೀ ಸದ್ದಿಗೆ ಸಾರ್ವಜನಿಕರು ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ್ದಾರೆ. ಸ್ಫೋಟಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಶ್ರೀನಿವಾಸ್, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ್ ನಾಯ್ಕ್ ಮೊದಲಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Also Read  ಕ.ರ.ವೇ ಸ್ವಾಭಿಮಾನಿ ಬಣ ಕಡಬ ತಾಲೂಕು ಘೋಷಣಾ ಸಮಾವೇಷ

error: Content is protected !!
Scroll to Top